ಹುಟ್ಟುಹಬ್ಬದ ಪಾರ್ಟಿಗೆಂದು ಹೋಗಿದ್ದ ಯುವಕ ಮೃತದೇಹವಾಗಿ ಪತ್ತೆ


ಒಡಿಶಾ: ಹುಟ್ಟುಹಬ್ಬದ ಪಾರ್ಟಿ ಮಾಡಲೆಂದು ಹೋದ ಯುವಕನೋರ್ವನು ಖಂಡಗಿರಿಯ ಓಯೋ ಹೋಟೆಲ್‌ ರೂಮ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಕಟಕ್ ಜಿಲ್ಲೆಯ ನಿಯಾಲಿ ನಿವಾಸಿ ದುರ್ಗಾ ಪ್ರಸಾದ್‌ ಮಿಶ್ರಾ ಮೃತಪಟ್ಟ ಯುವಕ. ಈತ ಹುಟ್ಟುಹಬ್ಬದ ಆಚರಣೆಗೆಂದು ಓಯೋ ಹೋಟೆಲ್‌ಗೆ ಹೋದವನು ಮೃತದೇಹವಾಗಿ ಪತ್ತೆಯಾಗಿದ್ದಾನೆ.‌ ಈತ ತನ್ನ ಸ್ನೇಹಿತೆಯ ವಾಶ್‌ರೂಂನಲ್ಲಿದ್ದ ದುಪಟ್ಟಾ ಬಳಸಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿರುವ ಖಾಂದಗಿರಿ ಪೊಲೀಸ್ ಠಾಣಾ ಸಿಬ್ಬಂದಿ ಮೃತ ಯುವಕನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ. ಯುವಕನ ಮೊಬೈಲ್ ಅನ್ನು ವಶಕ್ಕೆ ಪಡೆದ ಪೊಲೀಸರು ಸಾವಿನ ಕಾರಣ ಪತ್ತೆ ಮಾಡಲು ತನಿಖೆ ನಡೆಸುತ್ತಿದ್ದಾರೆ.

ದುರ್ಗಾ ಪ್ರಸಾದ್ ಮಿಶ್ರ ತನ್ನ ಗೆಳತಿ ಹಾಗೂ ಇನ್ನಿಬ್ಬರು ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿಗೆಂದು ಹೊಟೇಲ್ ರೂಂ ಬುಕ್ ಮಾಡಿದ್ದ. ಆದರೆ ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು ದುರ್ಗಾನನ್ನು ಅಲ್ಲಿಯೇ ಹತ್ಯೆಆಡುವ ಸಂಚನ್ನು ಆತನ ಸ್ನೇಹಿತರು ಮಾಡಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.