Mangalore:- ಜಿಲ್ಲೆಯ ಗೂಂಡಾ ಪ್ರವೃತ್ತಿಯ 11 ಮಂದಿಯನ್ನು ಗಡಿಪಾರು ಮಾಡಿ ಅದೇಶ.



ಮಂಗಳೂರು

ದ.ಕ.ಜಿಲ್ಲಾ ಪೋಲೀಸ್ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ , ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೋಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಅವರು ವಿಚಾರಣೆ ಕೈಕೊಂಡು ಅಪರಾಧ ಪ್ರವೃತ್ತಿವುಳ್ಳ ,ಸಮಾಜದ ಸ್ವಾಸ್ಥ್ಯ ಕ್ಕೆ ಗಂಡಾಂತರಕಾರಿಯಾದ ದ.ಕ.ಜಿಲ್ಲೆಯ 11 ಜನರನ್ನು ದ.ಕ.ಜಿಲ್ಲೆ ಯಿಂದ ಮಾ.6 ರಿಂದ ಸೆ. 6. ರ ವರೆಗೆ ಗಡಿಪಾರು ಮಾಡಿ  ಆದೇಶ ಹೊರಡಿಸಿದ್ದಾರೆ.

ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಗೋಳ್ತಮಜಲು ನಿವಾಸಿ ನಜೀರ್ ಕುಣಿಗಲ್, ಬಾಳ್ತಿಲ ನಿವಾಸಿ ಇಬ್ರಾಹಿಂ ಖಲೀಲ್,ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಜಯರಾಜ್ ರೈ,ಇಬ್ರಾಹಿಂ, ಹಕೀಂ ಕೂರ್ನಡ್ಕ, ಬೆಳ್ಳಾರೆ ಪೋಲೀಸ್ ಠಾಣಾ ವ್ಯಾಪ್ತಿಯ ರೋಷನ್, ಪ್ರಸಾದ್, ಉಪ್ಪಿನಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ಅಬೂಬಕ್ಕರ್, ಉಬೈದ್ ಬಿಎಸ್. ತಸ್ಲೀಂ, ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಕಿರಣ್ ಕುಮಾರ್ ಅವರನ್ನು ಗಡಿಪಾರು ಮಾಡಿ ಎಂದು ಆದೇಶ ಮಾಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu