ಸಂಚಾರದಲ್ಲಿದ್ದ ಕಾರಿನ ಮೇಲೆ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ: ತಾಯಿ - ಮಗಳು ಸ್ಥಳದಲ್ಲಿಯೇ ದಾರುಣ ಸಾವು
Wednesday, February 1, 2023
ಬೆಂಗಳೂರು: ನಿಯಂತ್ರಣ ತಪ್ಪಿದ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಸಂಚಾರದಲ್ಲಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ತಾಯಿ ಹಾಗೂ ಮಗಳು ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಸಮೀಪದ ಬಾಳಮಾರು ದೊಡ್ಡಿ ಬಳಿ ನಡೆದಿದೆ.
ಬಳ್ಳಾರಿ ಮೂಲದ ತಾಯಿ ಗಾಯತ್ರಿ ಕುಮಾರ್(47), ಪುತ್ರಿ ಸಮತಾ ಕುಮಾರ್ ಮೃತಪಟ್ಟ ದುರ್ದೈವಿಗಳು.
ಗಾಯತ್ರಿ ಕುಮಾರ್ ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯವಿದೆ. ಬುಧವಾರ ತಾಯಿ ಗಾಯತ್ರಿ ಕುಮಾರ್ ಅವರು ತಮ್ಮ ಪುತ್ರಿಯನ್ನು ಶಾಲೆಗೆ ಬಿಡಲೆಂದು ಕಾರಿನಲ್ಲಿ ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರುಘಟ್ಟಕ್ಕೆ ಬರುತ್ತಿದ್ದರು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಇವರು ಸಂಚರಿಸುತ್ತಿದ್ದ ಕಾರಿನ ಮೇಲೆಯೇ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ತಾಯಿ - ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.