ತವರು ಮನೆಗೆ ಹೋದ ಪತ್ನಿ ಮರಳಿ ಬರಲು ವಿಳಂಬ: ತನ್ನ ಮರ್ಮಾಂಗವನ್ನೇ ಕತ್ತರಿಸಿ ಎಸೆದ ಪತಿ
Sunday, January 22, 2023
ಪಟನಾ: ತವರು ಮನೆಗೆ ಹೋದ ಪತ್ನಿ ಮರಳಿ ಬಾರದಿರುವುದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಬಿಹಾರದ ರಜನಿ ನಯಾನಗರದಲ್ಲಿ ಶುಕ್ರವಾರ ನಡೆದಿದೆ.
ಮರ್ಮಾಂಗವನ್ನು ಕತ್ತರಿಸಿಕೊಂಡ ವ್ಯಕ್ತಿ ಕೃಷ್ಣ ಬಾಸುಕಿ (35). ಅನಿತಾ ಎಂಬಾಕೆಯನ್ನು ಕೃಷ್ಣ ಬಾಸುಕಿ ವಿವಾಹವಾಗಿದ್ದ. ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.
ಕೃಷ್ಣ ಬಾಸುಕಿ, ಪಂಜಾಬ್‌ನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಬಿಹಾರದಲ್ಲಿರುವ ತನ್ನ ಕುಟುಂಬವನ್ನು ನೋಡಲು ಆಗಾಗ ಮನೆಗೆ ಭೇಟಿ ನೀಡುತ್ತಿದ್ದ. ಆದರೆ, ಕೃಷ್ಣ ಬಾಸುಕಿ ಮನೆಗೆ ಬಂದರೂ ಪತ್ನಿ ಅನಿತಾ ತನ್ನ ತವರು ಮನೆಯಿಂದ ಬರಲು ವಿಳಂಬ ಮಾಡಿದ್ದಾಳೆ. ಈ ಬಗ್ಗೆ ವಿಚಾರಿಸಿದಾ್ ಪತಿಗೆ ಆಕ್ರೋಶ ಮತ್ತು ಬೇಸರ ತರುವಂತಹ ಮಾತುಗಳನ್ನು ಆಡಿದ್ದಾಳೆ.
ಪತ್ನಿಯ ವರ್ತನೆಯಿಂದ ಆಕ್ರೋಶಗೊಂಡ ಕೃಷ್ಣ ಬಾಸುಕಿ, ತನ್ನ ಮರ್ಮಾಂಗವನ್ನೇ ಕತ್ತರಿಸಿ ಎಸೆದಿದ್ದಾನೆ. ಆತನ ಕುಟುಂಬ ಸದಸ್ಯರು ಹೇಳುವ ಪ್ರಕಾರ ಆತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಸದ್ಯ ಈ ಪ್ರಕರಣ ಇದೀಗ ಬಿಹಾರದಲ್ಲಿ ಭಾರಿ ಚರ್ಚೆಯಾಗುತ್ತಿದೆ.