ಮಂಗಳೂರು: ತಡರಾತ್ರಿ ತಿರುಗಾಡುತ್ತಿದ್ದ ಹಿಂದೂ - ಮುಸ್ಲಿಂ ಜೋಡಿಗಳ ಮೇಲೆ ಬಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ


ಮಂಗಳೂರು: ನಗರದಲ್ಲಿ ಮತ್ತೆ ಬಜರಂಗದಳದ ಕಾರ್ಯಕರ್ತರು ನೈತಿಕಪೊಲೀಸ್ ಗಿರಿ ನಡೆಸಿದೆ. ಮಂಗಳೂರು ನಗರದ ಕೊಟ್ಟಾರದಲ್ಲಿ ತಡರಾತ್ರಿ ವೇಳೆ ಸುತ್ತಾಡುತ್ತಿದ್ದ ಹಿಂದೂ-ಮುಸ್ಲಿಂ ಜೋಡಿಗಳ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದೆ.

ತಡರಾತ್ರಿ 12 ಗಂಟೆ ಸುಮಾರಿಗೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರು ಸುತ್ತಾಡುತ್ತಿದ್ದಾರದು ಬಜರಂಗದಳದ ಕಾರ್ಯಕರ್ತರು ಅವರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದೆ. ಈ ವೇಳೆ ಜೋಡಿಗಳು ತಾವು ಹೊಟೇಲ್ ಗೆ ಊಟಕ್ಕೆ ಬಂದಿರುವುದಾಗಿ ಹೇಳಿದೆ.‌ ಮಧ್ಯರಾತ್ರಿ ಯಾವ ಹೊಟೇಲ್ ಇದೆ ಎಂದು ಹೇಳಿ ಹಲ್ಲೆಗೆ ಯತ್ನ ನಡೆಸಲಾಗಿದೆ.

ಉರ್ವ ಠಾಣಾ ಪೊಲೀಸರು ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಜೋಡಿಗಳು ತೆರಳಿದೆ ಎಂದು ತಿಳಿದು ಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu