'ಪೊಲೀಸರೇ ನನ್ನನ್ನು ಸಾಯಿಸಲು ಹೊರಟಿದ್ದಾರೆ ನ್ಯಾಯ ಕೊಡಿಸಿ' ಎಂದು ದುಃಖ ತೋಡಿಕೊಂಡ ಯುವಕ...!‌


ಮಂಗಳೂರು: ರಾಜ್ಯದಲ್ಲಿ ಹಲವೆಡೆ ಪೊಲೀಸ್ ದೌರ್ಜನ್ಯದ ಕುರಿತು ವರದಿಯಾಗುತ್ತಿದೆ. ಇದೀಗ ಯುವಕನೋರ್ವನು 'ಪೊಲೀಸರೇ ನನ್ನನ್ನು ಸಾಯಿಸಲು ಹೊರಟಿದ್ದಾರೆ' ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡು ದುಃಖ ತೋಡಿಕೊಂಡಿದ್ದಾನೆ.

ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ನಂದೀಶ್ ಎಂಬ ಯುವಕ ಈ ರೀತಿ ಆರೋಪ ಮಾಡಿದಾತ. ಈತ ರಾಜರಾಜೇಶ್ವರಿ ಪೊಲೀಸ್ ಠಾಣಾ ಸಿಬ್ಬಂದಿ ವಿರುದ್ಧ ಗಂಭೀರವಾದ ಆರೋಪ ಹೊರಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. 

'ಈ ಹಿಂದೆಯೂ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ದಂಡಿಸಿದ್ದರು. ಈಗ ನನ್ನ ಮೊಬೈಲ್ ಫೋನ್ ಅನ್ನು ಅಕ್ರಮವಾಗಿ ಇರಿಸಿಕೊಂಡಿದ್ದಾರೆ. ನನ್ನನ್ನು ಪೊಲೀಸರು ಸಾಯಿಸುತ್ತಾರೆ. ನನ್ನ ಸಾವಿಗೆ ಇನ್ನೇನು ಕೆಲವೇ ಕ್ಷಣಗಳು ಮಾತ್ರ ಇದೆ' ಎಂದು ಅಲವತ್ತುಕೊಂಡಿದ್ದಾರೆ. ಅವರು ಹೀಗೆ ಬರೆದುಕೊಂಡು ನವೀನ್ ಎಂಬ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಮಾಡಿ ಅವರ ಫೋನ್ ನಂಬರ್ ಅನ್ನು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
BREAKING NEWS
Loading latest news...
Join our WhatsApp Channel Powered By : Online Pudu