ಉಳ್ಳಾಲ: ಸೋಮೇಶ್ವರ ಸಮುದ್ರ ವಿಹಾರಕ್ಕೆ ಬಂದಿದ್ದ ವ್ಯಕ್ತಿ ಮೃತ್ಯು




ಉಳ್ಳಾಲ: ಉಳ್ಳಾಲದ ಸೋಮೇಶ್ವರ ಬೀಚ್ ಗೆ ಸಮುದ್ರ ವಿಹಾರಕ್ಕೆಂದು ಬಂದಿರುವ ವ್ಯಕ್ತಿ ಅಲೆಯ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ.

ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್(47) ಮೃತಪಟ್ಟವರು. ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಬಸ್ ಚಾಲಕರಾಗಿದ್ದ ಪ್ರಶಾಂತ್ ಬೇಕಲ್, ರವಿವಾರ ಬೆಳಗ್ಗೆ ಪುತ್ರ ಚಿರಾಯು ಬೇಕಲ್, ಸಹೋದರ ವರದರಾಜ್ ಬೇಕಲ್, ಅವರ ಪುತ್ರ ವಂದನ್ ಬೇಕಲ್ ಹಾಗೂ ಇತರ ಸ್ನೇಹಿತರೊಂದಿಗೆ ಸೋಮೇಶ್ವರ ಬೀಚ್ ಗೆ ವಿಹಾರಕ್ಕೆ ಬಂದಿದ್ದರು. ಪ್ರತೀ ರವಿವಾರದಂತೆ ಅವರು ಇಂದು ಸಮುದ್ರ ತೀರಕ್ಕೆ ವಿಹಾರಕ್ಕೆ ಆಗಮಿಸಿದ್ದರು. ಎಂದಿನಂತೆ ಸಮುದ್ರಕ್ಕಿಳಿದಿದ್ದ ಪ್ರಶಾಂತ್ ನೀರುಪಾಲಾಗಿದ್ದಾರೆ.

ಪ್ರಶಾಂತ್ ಅವರ ಪುತ್ರ ಚಿರಾಯು ಈಜು ಪರಿಣತನಾಗಿದ್ದು ತಕ್ಷಣ ಹಗ್ಗದಿಂದ ತಂದೆಯನ್ನು ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ಹಾಕಿದ್ದಾರೆ. ಆದರೆ ಅದಾಗಲೇ ಪ್ರಶಾಂತ್ ಅಸುನೀಗಿದ್ದರು. ಮೃತ ಪ್ರಶಾಂತ್ ಅವರ ಏಕೈಕ ಪುತ್ರ ಚಿರಾಯು ಇಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿದ್ದಾರೆ. ಮೃತರು ತಾಯಿ, ಪತ್ನಿ, ಪುತ್ರ, ಇಬ್ಬರು ತಮ್ಮಂದಿರನ್ನು ಆಗಲಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu