ಬಾಲಕಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಮೂವರು ಅರೆಸ್ಟ್


ಮಂಗಳೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಮುಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿ ಬೆಳ್ಳಾಯೂರು ಗ್ರಾಮದ ಕೆಂಚನಕೆರೆಯ ದಿವ್ಯೇಶ್ ದೇವಾಡಿಗ (38), ರಾಜೇಶ್ ಕೆರೆಕಾಡು ಮತ್ತು ಯೋಗೀಶ್ ಕುಮಾರ್ ಬಂಧಿತ ಆರೋಪಿಗಳು.

ಮುಲ್ಕಿಯ ಕೆರೆಕಾಡು ಎಂಬಲ್ಲಿ ಡಿಸೆಂಬರ್ 13ರಂದು ಬಾಲಕಿಯನ್ನು ಬೈಕ್ ನಲ್ಲಿ ಹಿಂಬಾಲಿಸಿರುವ ಆರೋಪಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಹಾಗೂ ಆತನ ಸ್ನೇಹಿತರಿಬ್ಬರು ಹಿಂಬಾಲಿಸಿಕೊಂಡು ಬಂದಿದ್ದಾರೆ. ನಿನ್ನೆ ಮತ್ತೆ ಅದೇ ಸ್ಥಳದಲ್ಲಿ ಆರೋಪಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಕುಪಿತಕೊಂಡ ಬಾಲಕಿಯ ತಂದೆ ಹಾಗೂ ಸ್ನೇಹಿತರು ವ್ಯಕ್ತಿಯನ್ನು ಕಂಬಕ್ಕೆ  ಕಟ್ಟಿ ಹಾಕಿ ಹೊಡೆದಿದ್ದಾರೆ. ಆರೋಪಿಯನ್ನು ಬಂಧಿಸಿ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ನೀಡಿರುವ ದೂರಿನನ್ವಯ  ಮೂವರನ್ನು ಬಂಧಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu