ಬಜ್ಪೆ: 11 ವರ್ಷದ ಪುತ್ರನ ಮುಂಭಾಗವೇ ಪತಿಯಿಂದ ಪತ್ನಿ ಹತ್ಯೆ

ಬಜ್ಪೆ: 11ವರ್ಷದ ಪುತ್ರನ ಮುಂಭಾಗವೇ ನಿರ್ದಯಿ ಪತಿಯೊಬ್ಬ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಘಟನೆ ನಗರದ ಬಜ್ಪೆ ಠಾಣಾ ವ್ಯಾಪ್ತಿಯ ತೆಂಕ ಎಕ್ಕಾರು ಗ್ರಾಮದಲ್ಲಿ ನಡೆದಿದೆ.

ತೆಂಕ ಎಕ್ಕಾರು ಗ್ರಾಮದ ನಿವಾಸಿ ಸರಿತಾ ಹತ್ಯೆಯಾದ ದುರ್ದೈವಿ ಮಹಿಳೆ. ಆಕೆಯ ಪತಿ ದುರ್ಗೇಶ್ ಹತ್ಯೆಗೈದ ಆರೋಪಿ.

ರವಿವಾರ ರಾತ್ರಿ 8:30ರ ಸುಮಾರಿಗೆ ದುರ್ಗೇಶ್ ಹಾಗೂ ಪತ್ನಿ ಸರಿತಾ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಮದ್ಯದ ಮತ್ತಿನಲ್ಲಿದ್ದ ದುರ್ಗೇಶ್ ಅಲ್ಲಿಯೇ ಇದ್ದ ಮರದ ರೀಪುವಿನಿಂದ ಪತ್ನಿಗೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಸರಿತಾ ವಿಪರೀತ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. 

ಘಟನೆಯ ಸಂದರ್ಭದಲ್ಲಿ ಮನೆಯಲ್ಲಿದ್ದ ದಂಪತಿಯ 11 ವರ್ಷದ ಪುತ್ರ ರಾಹುಲ್ ಬೆದರಿ ತನ್ನ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ದುರ್ಗೇಶ್ ತನ್ನ ಅಣ್ಣ ಮಧುಗೆ ಕರೆ ಮಾಡಿ ಸರಿತಾ ಮೃತಪಟ್ಟಿರುದಾಗಿ ತಿಳಿಸಿದ್ದಾನೆ. ಬಳಿಕ ಮಧು ಸ್ಥಳಕ್ಕೆ ಬಂದು ನೋಡಿದಾಗ ದುರ್ಗೇಶ್ ಸರಿತಾರಿಗೆ ಮರದ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವುದು ತಿಳಿದು ಬಂದಿದೆ.

ಈ ಬಗ್ಗೆ ಬಜಪೆ ಪೊಲೀಸ್ ಠಾಣಾ ಕೊಲೆ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu