ಜನವರಿ 17, 2023 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ.
ಶನಿಸಾಡೇ ಸಾತಿ ಅನೇಕ ರೀತಿಯಲ್ಲಿ ದುಃಖವನ್ನು ಉಂಟುಮಾಡುತ್ತದೆ. ಸಾಡೇಸಾತಿ ಸಮಯದಲ್ಲಿ ಉದ್ಯೋಗ-ವ್ಯವಹಾರದಲ್ಲಿ ನಷ್ಟ, ಅನಗತ್ಯ ಅಡೆತಡೆಗಳು, ಹಣ ನಷ್ಟ, ಸಂಬಂಧಗಳಲ್ಲಿ ಬಿರುಕು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ಸಂದರ್ಭದಲ್ಲಿ ಶನಿ ದೇವನಿಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಾ ಬಂದರೆ ಶನಿದೇವನ ಕೃಪೆಗೆ ಪಾತ್ರರಾಗಬಹುದು.
ಶನಿ ದೋಷದ ಪರಿಹಾರ ಇಲ್ಲಿದೆ ನೋಡಿ..!
ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಹೋಗಿ, ಶನಿದೇವನಿಗೆ ಎಣ್ಣೆಯನ್ನು ಅರ್ಪಿಸಬೇಕು. ಅಶ್ವಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಬೇಕು. ಅಸಹಾಯಕ, ಬಡವರಿಗೆ ಸಹಾಯ ಮಾಡಬೇಕು. ಈ ವರ್ಗದ ಜನರಿಗೆ ದಾನ ಮಾಡಿದರೆ ಇನ್ನೂ ಒಳ್ಳೆಯದು. ನಾಯಿಗಳಿಗೆ ಆಹಾರ ನೀಡಿದರೆ ಶುಭ ಫಲ ಸಿಗುವುದು.