ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನೇ ಹತ್ಯೆ ಮಾಡಿದ ಪತ್ನಿ - ಪ್ರಿಯಕರ ಅರೆಸ್ಟ್

ಬೆಂಗಳೂರು: ಪ್ರಿಯಕರನೊಂದಿಗೆ ಸೇರಿಕೊಂಡು ತಾಳಿಕಟ್ಟಿರುವ ಪತಿಯನ್ನೇ ಹತ್ಯೆ ಮಾಡಿದ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಚಂದ್ರಶೇಖರ ಕೊಲೆಯಾದ ದುರ್ದೈವಿ ಪತಿ. ಕೊಲೆ ಆರೋಪಿಗಳಾದ ಶ್ವೇತಾ(21) ಹಾಗೂ ಆಕೆಯ ಪ್ರಿಯಕರ ಸುರೇಶ್ ಅಲಿಯಾಸ್ ಮೂಲಿಸೂರಿ(25) ಎಂಬವರು ಪೊಲೀಸ್ ಕಂಬಿ ಎಣಿಸುತ್ತಿರುವ ಜೋಡು. 

ಯಲಹಂಕದ ಕೊಂಡಪ್ಪಲೇಔಟ್ ನ ಮೂರನೇ ಮಹಡಿಯ ಮನೆಯ ಟೆರೆಸ್ ಮೇಲೆ ಚಂದ್ರಶೇಖರ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಬಗ್ಗೆ ಚಂದ್ರಶೇಖರ್ ಮಾವ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಯಲ್ಲಿ ಅ.21 ರಂದು ದೂರು ದಾಖಲಿಸಿದ್ದರು . ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಂದ ಈ ಕೃತ್ಯ ಕೊಲೆಯಾದ ಚಂದ್ರಶೇಖರ್ ಪತ್ನಿ ಶ್ವೇತಾಳಿಂದಲೇ ನಡೆದಿದೆ ಎಂದು ಬಯಲಾಗಿದೆ. 

ಶ್ವೇತಾ ಹಾಗೂ ಸುರೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಚಂದ್ರಶೇಖರ್ ಜೊತೆ ಶ್ವೇತಾಳ ಮದುವೆ ನಡೆಯುವುದಕ್ಕೂ ಮುಂಚಿನಿಂದಲೂ ಇಬ್ಬರ ನಡುವೆ ಪ್ರೀತಿಯಿತ್ತು‌. ಈ ಮದುವೆ ಇಷ್ಟವಿಲ್ಲದಿದ್ದರೂ ತಾಯಿಯ ತಮ್ಮನೊಂದಿಗೆ ಶ್ವೇತಾ ಬಲವಂತವಾಗಿ ಮದುವೆ ಆಗಿದ್ದಳು. ಮದುವೆ ಬಳಿಕವೂ ಶ್ವೇತಾ ಹಾಗೂ ಸುರೇಶ್ ನಡುವೆ ಪ್ರೀತಿ ಮುಂದುವರಿದಿದ್ದು, ವಿವಾಹೇತರ ಸಂಬಂಧವನ್ನು ಹೊಂದಿದ್ದರು.

ಇವರಿಬ್ಬರ ಅಕ್ರಮ ಸಂಬಂಧಕ್ಕೆ ಪತಿಯೇ ಅಡ್ಡಿಯಾಗಿದ್ದ ಆದ್ದರಿಂದ ಆತನನ್ನು ಸಾಯಿಸಲು ಪ್ರಿಯಕರನೊಂದಿಗೆ ಸೇರಿ, ಶ್ವೇತಾ ಸಂಚು ರೂಪಿಸಿದ್ದಳು. ಬಳಿಕ ತಮ್ಮ ಪ್ಲಾನ್‌ನಂತೆ ಕೊಲೆಗೈದು, ಯಾರಿಗೂ ಗೊತ್ತಿಲ್ಲದಂತೆ ಶ್ವೇತಾ ಮತ್ತು ಸುರೇಶ್ ನಾಟಕವಾಡಿದ್ದರು. ಇದೀಗ ಇಬ್ಬರ ಮುಖವಾಡ ಕಳಚಿಬಿದ್ದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.
BREAKING NEWS
Loading latest news...
Join our WhatsApp Channel Powered By : Online Pudu