ಮಂಗಳೂರು: ಹೆಸರು ಬೇಳೆ, ಐಸ್ ಕ್ರೀಂ ನಲ್ಲಿತ್ತು ವಿಷ ಪದಾರ್ಥ; ಒಂದೇ ಕುಟುಂಬದ ನಾಲ್ವರು ಆಸ್ಪತ್ರೆಗೆ

ಮಂಗಳೂರು: ಹೆಸರು ಬೇಳೆ, ಐಸ್ ಕ್ರೀಂ ತಿಂದು ಮಲಗಿದ ಒಂದೇ ಕುಟುಂಬದ ನಾಲ್ವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜೆಪ್ಪು ಬಪ್ಪಲ್ ನಿವಾಸಿಗಳಾದ ಅರವಿಂದ ರಾವ್(52), ಪ್ರಭಾವತಿ (45), ಸೌರಭ್ (20) ಜಾಗ ಪ್ರತೀಕ್ (18) ಅಸ್ವಸ್ಥಗೊಂಡವರು.

ನಿನ್ನೆ ರಾತ್ರಿ ವೇಳೆ ಹೆಸರು ಬೆಳೆ ಹಾಗೂ ಐಸ್ ಕ್ರಿಮ್ ತಿಂದು ಕುಟುಂಬ ಮಲಗಿದ್ದಾರೆ. ಆದರೆ ಇಂದು ಬೆಳಿಗ್ಗೆ ಅವರ ಮನೆಯ ಬಾಗಿಲ ತೆಗೆಯದ ಹಿನ್ನಲೆಯಲ್ಲಿ ಪಕ್ಕದಲ್ಲಿದ್ದ  ಸಂಬಂಧಿಕರು ಬಂದು ನೋಡಿದಾಗ ಎಲ್ಲರೂ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ತಕ್ಷಣ ಎಲ್ಲರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ  ನೀಡಲಾಗಿದೆ. ಇದೀಗ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu