ಕುಕ್ಕರ್ ಸಿಡಿದು 4ನೇ ತರಗತಿಯ ಶಾಲಾ ಬಾಲಕಿ ಗಂಭೀರ ಗಾಯ


ಚಿಕ್ಕಮಗಳೂರು: ಕುಕ್ಕರ್ ಸಿಡಿದು 4ನೇ ತರಗತಿಯ ಶಾಲಾ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಕೋಡು ಗ್ರಾಮದಲ್ಲಿ ವರದಿಯಾಗಿದೆ. 

ಬ್ಯಾರವಳ್ಳಿ ಗ್ರಾಮದ ಶಾಲಾ ಬಾಲಕಿ ಮಾಕೋಡು ಗ್ರಾಮದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಮಧ್ಯಾಹ್ನ ಶಾಲೆಯ ಅಡುಗೆ ಸಿಬ್ಬಂದಿ ಕುಕ್ಕರ್ ನಲ್ಲಿ ಅಡುಗೆ ಮಾಡಿ ಇಟ್ಟಿದ್ದರು. ಶಾಲಾ ಶಿಕ್ಷಕರೊಬ್ಬರು 4 ನೇ ತರಗತಿಯ ಈ ಬಾಲಕಿಯನ್ನು ಕುಕ್ಕರ್ ನಲ್ಲಿರುವ ಅಡುಗೆ ಬಡಿಸಿಕೊಂಡು ಊಟ ಮಾಡಲು ಹೇಳಿದ್ದಾರೆನ್ನಲಾಗಿದೆ. ಅಡುಗೆ ಕೋಣೆಗೆ ಹೋದ ಶಾಲಾ ಬಾಲಕಿ ಏಕಾಏಕಿ ಕುಕ್ಕರ್ ಮುಚ್ಚಳ ತೆಗೆದಿದ್ದಾಳೆ. ಪರಿಣಾಮ ಕುಕ್ಕರ್ ದಿಢೀರ್ ಸಿಡಿದಿದೆ ಎಂದು ತಿಳಿದು ಬಂದಿದೆ. 

ಘಟನೆಯಿಂದ  ಬಾಲಕಿಯ ಮುಖಕ್ಕೆ ಗಂಭೀರವಾದ ಗಾಯಗಳಾಗಿದೆ. ತಕ್ಷಣ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಶಿಕ್ಷಕನ ಬೇಜವಾಬ್ದಾರಿಯೇ ಬಾಲಕಿಯ ಈ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಿಕ್ಷಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಬಾಲಕಿ ಪೋಷಕರು ಒತ್ತಾಯಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu