ನ್ಯಾಯಾಲಯದ ಆವರಣದಲ್ಲಿಯೇ ಪತ್ನಿಯ ಕತ್ತು ಕೊಯ್ದ ಕೊಲೆಗೈದ ಪರಮ ಪಾಪಿ ಪತಿ

ಹಾಸನ: ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದ ದಂಪತಿ ರಾಜಿ ಸಂಧಾನಕ್ಕಾಗಿ  ನ್ಯಾಯಾಲಯಕ್ಕೆ ಬಂದಿದ್ದ ಪತಿ  ನ್ಯಾಯಾಲಯದ ಆವರಣದಲ್ಲಿಯೇ ಪತ್ನಿಯ ಕುತ್ತಿಗೆ ಕೊಯ್ದು ಕೊಲೆಗೈದಿರುವ ಆತಂಕಕಾರಿ ಘಟನೆಯೊಂದು ಹೊಳೆನರಸೀಪುರದಲ್ಲಿ ನಡೆದಿದೆ.

ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮ ನಿವಾಸಿ ಶಿವಕುಮಾರ್ ಕೊಲೆಗೈದ ಆರೋಪಿ ಪತಿ. ಏಳು ವರ್ಷಗಳ ಹಿಂದೆ ಶಿವಕುಮಾರ್ ಚನ್ನರಾಯಪಟ್ಟಣದ ಚೈತ್ರಾರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಇವರು ವಿಚ್ಛೇದನ ಪಡೆಯಲೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಲೋಕ ಅದಾಲತ್ ಇದ್ದ ಕಾರಣ ರಾಜಿ ಸಂಧಾನಕ್ಕೆ ಬಂದಿದ್ದರು. 

ಈ ಸಂದರ್ಭ ಆರೋಪಿ ಪತಿ ನ್ಯಾಯಾಲಯದ ಆವರಣದಲ್ಲಿ ಪತ್ನಿಯ ಕತ್ತು ಸೀಳಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಚೈತ್ರಾರನ್ನು ಸ್ಥಳಿಯರು ತಕ್ಷಣ ಆಸ್ಪತ್ರೆ ಸಾಗಿಸಿ, ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ತಕ್ಷಣ ಪರಾರಿ ಆಗಲು ಯತ್ನಿಸಿದ್ದ ಆರೋಪಿ ಶಿವಕುಮಾರ್ ನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu