ಇದೀಗ ಮೇಘನಾ ಸರ್ಜಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸಂಗತಿ ಎಲ್ಲೆಡೆ ಹರಿದಾಡಲಾರಂಭಿಸಿದೆ. ಇತ್ತೀಚಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಮೇಘನಾ ರಾಜ್, ನನ್ನ ಸುತ್ತಲೂ ಇರುವ ಹಲವರು ನನಗೆ ಎರಡನೇ ಮದುವೆಯಾಗಲು ಸಲಹೆ ನೀಡುತ್ತಿದ್ದಾರೆ. ಆದರೆ ಒಂಟಿಯಾಗಿರಲು ಮತ್ತು ಒಂಟಿಯಾಗಿಯೇ ಮಗನನ್ನು ಬೆಳೆಸಲು ಸಲಹೆ ನೀಡುವ ತಂಡವೂ ಇದೆ ಎಂದು ಮೇಘನಾ ಹೇಳಿದ್ದಾರೆ.
ನಮ್ಮ ಸಮಾಜವೇ ಹೀಗೆ. ಕೆಲವರು ನೀನು ಇನ್ನೊಂದು ಮದುವೆಯಾಗಬೇಕು ಅಂತಾರೆ. ಮತ್ತೆ ಕೆಲವರು ರಾಯನ್ ನ ನೋಡಿಕೊಂಡು ಒಂಟಿಯಾಗಿ ಖುಷಿಯಾಗಿರಬೇಕು ಎನ್ನುತ್ತಾರೆ. ಹೀಗಾಗಿ ನಾನು ಯಾರ ಮಾತನ್ನು ಕೇಳಲಿ? ಹೀಗಾಗಿ ನಾನು ನನ್ನ ಮನಸ್ಸಿನ ಮಾತು ಕೇಳಲು ತೀರ್ಮಾನಿಸಿದ್ದೇನೆ’ ಎಂದಿದ್ದಾರೆ.