-->
ಉಳ್ಳಾಲದ ಭಿನ್ನ ಕೋಮಿನ ಜೋಡಿ ಬೈಂದೂರಿನ ಲಾಡ್ಜ್‌ನಲ್ಲಿ!

ಉಳ್ಳಾಲದ ಭಿನ್ನ ಕೋಮಿನ ಜೋಡಿ ಬೈಂದೂರಿನ ಲಾಡ್ಜ್‌ನಲ್ಲಿ!

ಉಳ್ಳಾಲದ ಭಿನ್ನ ಕೋಮಿನ ಜೋಡಿ ಬೈಂದೂರಿನ ಲಾಡ್ಜ್‌ನಲ್ಲಿ!ಅನ್ಯ ಕೋಮಿಗೆ ಸೇರಿದ ಪುರುಷನೊಬ್ಬ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯನ್ನು ಪುಸಲಾಯಿಸಿ ವಸತಿಗೃಹಕ್ಕೆ ಕರೆದೊಯ್ದ ಘಟನೆ ಉಡುಪಿ ಜಿಲ್ಲೆಯ ಉಪ್ಪುಂದದಲ್ಲಿ ನಡೆದಿದೆ.


ಮಂಗಳೂರಿನ ಹೊರವಲಯದಲ್ಲಿ ಇರುವ ತೊಕ್ಕೊಟ್ಟು ಪ್ರದೇಶದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಉಳ್ಳಾಲ ಬೈಲು ನಿವಾಸಿ 45 ವರ್ಷ ಪ್ರಾಯದ ಅಮೀರ್ ಅಲಿ ವಸತಿಗೃಹದಲ್ಲಿ ಸಿಕ್ಕಿ ಬಿದ್ದ ವ್ಯಕ್ತಿ. ಈತನೊಂದಿಗೆ ಉಳ್ಳಾಲದ 28 ವರ್ಷ ಪ್ರಾಯದ ಯುವತಿಯೊಬ್ಬರು ಇದ್ದರು.


ಹಿಂದೂ ಸಂಘಟನೆಯ ಕಾರ್ಯಕರ್ತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಲಾಡ್ಜ್‌ ಗೆ ತೆರಳಿ ಈ ಜೋಡಿಯನ್ನು ಠಾಣೆಗೆ ಕರೆದೊಯ್ದು, ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.


ಈ ಯುವತಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಅಮೀರ್ ಅಲಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಇಬ್ಬರು ಪರಸ್ಪರ ಒಪ್ಪಿಗೆಯಿಂದಲೇ ಲಾಡ್ಜ್‌ಗೆ ಬಂದಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ. 


ಪರಸ್ಪರ ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಮಾನ್ಯ ಉಚ್ಚ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಮದುವೆಯ ಭರವಸೆ ನೀಡಿ ನಡೆಸಿದ ಲೈಂಗಿಕ ಕ್ರಿಯೆಯೂ ಅತ್ಯಾಚಾರವಲ್ಲ ಎಂಬ ತೀರ್ಪು ಕೂಡ ಹೊರಬಂದಿರುವದನ್ನು ಇಲ್ಲಿ ಸ್ಮರಿಸಬಹುದು.


ಸದ್ರಿ ಪ್ರಕರಣದಲ್ಲಿ, ಯುವತಿ ಸ್ವ ಇಚ್ಚೆಯಿಂದ ಆತನ ಜೊತೆಗೆ ಬೈಂದೂರಿನ ಲಾಡ್ಜ್‌ಗೆ ಬಂದಿದ್ದಾಳೆಯೇ... ಅಥವಾ ಯಾವುದೇ ಬ್ಲ್ಯಾಕ್ ಮೇಲ್‌ಗೆ ಒಳಗಾಗಿ ಆತ ಯುವತಿಯನ್ನು ಕರೆದೊಯ್ದಿದ್ದಾನೆ ಎನ್ನುವುದು ಪೊಲೀಸರ ತನಿಖೆಯ ನಂತರ ಗೊತ್ತಾಗಲಿದೆ.

Ads on article

Advertise in articles 1

advertising articles 2

Advertise under the article