-->

SBI ವಾಟ್ಸ್ಯಾಪ್‌ ಬ್ಯಾಂಕಿಂಗ್: ಗ್ರಾಹಕರಿಗೆ ಸುಲಭ ಸೇವೆ.... ಬಳಸುವ ಬಗ್ಗೆ ಮಾಹಿತಿ ಇಲ್ಲಿದೆ..

SBI ವಾಟ್ಸ್ಯಾಪ್‌ ಬ್ಯಾಂಕಿಂಗ್: ಗ್ರಾಹಕರಿಗೆ ಸುಲಭ ಸೇವೆ.... ಬಳಸುವ ಬಗ್ಗೆ ಮಾಹಿತಿ ಇಲ್ಲಿದೆ..

SBI ವಾಟ್ಸ್ಯಾಪ್‌ ಬ್ಯಾಂಕಿಂಗ್: ಗ್ರಾಹಕರಿಗೆ ಸುಲಭ ಸೇವೆ.... ಬಳಸುವ ಬಗ್ಗೆ ಮಾಹಿತಿ ಇಲ್ಲಿದೆ..





ಆನ್‌ಲೈನ್ ಪೇಮೆಂಟ್ ಆಪ್‌ಗಳ ಮೂಲಕ ವಹಿವಾಟು ನಡೆಸುವುದರ ಜೊತೆಗೆ ಈಗ ವಾಟ್ಸ್ಯಾಪ್‌ ಮೂಲಕವೂ ಹಣಕಾಸಿನ ವಹಿವಾಟು ನಡೆಸುವುದು ಆರಂಭವಾಗಿದೆ. ನಮ್ಮ ಬ್ಯಾಂಕ್‌ ಖಾತೆಯನ್ನು ವಾಟ್ಸ್ಯಾಪ್‌ನಲ್ಲಿ ಲಿಂಕ್ ಮಾಡಿದರೆ ಆಪ್ ಮೂಲಕ ಪಾವತಿ ಮಾಡಬಹುದಾಗಿದೆ. 


ಈಗ ದೇಶದ ಅತೀ ದೊಡ್ಡ ಸಾರ್ವಜನಿಕ ವಲುದ ಬ್ಯಾಂಕ್ State Bank Of India (SBI) ವಾಟ್ಸಾಪ್‌ನಲ್ಲಿ ವಹಿವಾಟು ನಡೆಸುವ ಆಯ್ಕೆಯನ್ನು ತನ್ನ ಗ್ರಾಹಕರಿಗೆ ನೀಡಿದೆ.



SBI ವಾಟ್ಸ್ಯಾಪ್‌ ಸೇವೆ ಮೂಲಕ ಹಣಕಾಸು ವಹಿವಾಟು ನಡೆಸುವ ಆಯ್ಕೆಯನ್ನು ನೀಡಿದೆ. ಇನ್ನು ಮುಂದೆ, SBI ಗ್ರಾಹಕರು ವಾಟ್ಸಾಪ್ ಬ್ಯಾಲೆನ್ಸ್ ಹಾಗೂ ಸ್ಟೇಟ್‌ಮೆಂಟ್ ಅನ್ನು ವಾಟ್ಸ್ಯಾಪ್‌ ಮೂಲಕವೂ ತಿಳಿಯಬಹುದು. ಇನ್ನು ಈಗಾಗಲೇ ICICI ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, IDFC ಫಸ್ಟ್ ಬ್ಯಾಂಕ್, AXIS ಬ್ಯಾಂಕ್ ಈ ಸೇವೆಯನ್ನು ಹೊಂದಿದೆ.



"ನಿಮ್ಮ ಬ್ಯಾಂಕ್‌ ಈಗ ವಾಟ್ಸಾಪ್‌ನಲ್ಲಿದೆ. ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಲು ಹಾಗೂ ನಿಮ್ಮ ಖಾತೆಯ ಮಿನಿ ಸ್ಟೇಟ್‌ಮೆಂಟ್ ಅನ್ನು ಪಡೆಯಲು ಈ ಮೂಲಕ ಸಾಧ್ಯವಾಗಲಿದೆ," ಎಂದು SBI ಹೇಳಿದೆ.


SBI ವಾಟ್ಸ್ಯಾಪ್‌ ಸೇವೆಯನ್ನು ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


ಮೊದಲನೇ ಹಂತ: ರಿಜಿಸ್ಟ್ರೇಷನ್

SBI ವಾಟ್ಸ್ಯಾಪ್‌ ಸೇವೆಯನ್ನು ಪಡೆಯಬೇಕಾದರೆ ಮೊದಲು ಎಸ್‌ಬಿಐ ವಾಟ್ಸ್ಯಾಪ್‌ ಬ್ಯಾಂಕಿಂಗ್‌ನಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಅದಕ್ಕಾಗಿ ಗ್ರಾಹಕರು WAREG ಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಿ, 7208933148ಗೆ ಎಸ್‌ಎಂಎಸ್ ಮಾಡಬೇಕಾಗುತ್ತದೆ. ಆದರೆ ನಿಮ್ಮ SBI ಖಾತೆಗೆ ಯಾವ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೋ ಅದರಿಂದಲೇ ನೀವು ಈ SMS ಕಳುಹಿಸಬೇಕು.


ಎರಡನೇ ಹಂತ : ನಿಮಗೆ ಬರಲಿದೆ ವಾಟ್ಸ್ಯಾಪ್‌ ಸಂದೇಶ

SMS ಕಳುಹಿಸಿದ ಮೊದಲ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣವಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ವಾಟ್ಸ್ಯಾಪ್‌ ಸಂದೇಶ ಬರಲಿದೆ. ನಿಮಗೆ 90226 90226 ನಂಬರ್‌ನಿಂದ ವಾಟ್ಸ್ಯಾಪ್‌ ಸಂದೇಶ ಬರಲಿದೆ. ಈ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬಹುದು.


ಮೂರನೇ ಹಂತ : ವಾಟ್ಸ್ಯಾಪ್‌ ಬ್ಯಾಂಕಿಂಗ್ ಹೀಗೆ ಮಾಡಿ

ನೀವು ವಾಟ್ಸಾಪ್ ಬ್ಯಾಂಕಿಂಗ್ ಮಾಡಲು ಬಯಸಿದರೆ Hi SBI ಎಂದು 90226 90226 ಸಂಖ್ಯೆಗೆ ವಾಟ್ಸಾಪ್ ಮಾಡಬೇಕು. ಆಗ ಮೆಸೇಜ್ ಮಾಡಿದ ಗ್ರಾಹಕರಿಗೆ ಈ ಕೆಳಗೆ ನೀಡಲಾದ ಸಂದೇಶ ಬರುತ್ತದೆ.


ಪ್ರಿಯ ಗ್ರಾಹಕರೇ,

SBI Whatsapp Banking Servicesಗೆ ಸ್ವಾಗತ

ಈ ಕೆಳಗಿನ ಯಾವುದಾದರೂ ಒಂದನ್ನು ಆಯ್ಕೆ ಮಾಡಿರಿ

1. Account Balance

2. Mini Statement

3. De-register from WhatsApp Banking


ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಲು ಬಯಸಿದರೆ 1 ಎಂದು ಕಳುಹಿಸಬೇಕು. ಕಿರುತ ಹೇಳಿಕೆ ಯಾ Mini statement ಬೇಕಾದರೆ 2 ಎಂದು ಕಳುಹಿಸಿ. ವಾಟ್ಸ್ಯಾಪ್‌ ನೋಂದಣಿ ಮರುಪಡೆಯಲು ಬಯಸಿದರೆ 3 ಎಂದು ಕಳುಹಿಸಬೇಕು.


SBI ಕಾರ್ಡ್ ವಾಟ್ಸಾಪ್ ಬಗ್ಗೆ ತಿಳಿಯಿರಿ

'ಕ್ರೆಡಿಟ್ ಕಾರ್ಡ್' ಹೊಂದಿರುವವರಿಗೆ SBI ವಾಟ್ಸ್ಯಾಪ್‌ ಸೇವೆಯನ್ನು ನೀಡಲಿದೆ. ಗ್ರಾಹಕರ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ಪಡೆಯಲು ವಾಟ್ಸ್ಯಾಪ್‌ ಸೇವೆಯನ್ನು ಬಳಕೆ ಮಾಡಬಹುದು. ಇದಕ್ಕಾಗಿ OPTIN ಎಂದು 9004022022 ಗೆ ವಾಟ್ಸ್ಯಾಪ್‌ ಮಾಡಬೇಕಾಗುತ್ತದೆ. ನೀವು ಈ ಸೇವೆಗೆ 'ಸೈನ್‌-ಅಪ್' ಆಗಲು 08080945040 ಗೆ Missed Call ಮಾಡಬಹುದು.

Ads on article

Advertise in articles 1

advertising articles 2

Advertise under the article