ಹಿಂದೂ ದೇವತೆಗಳ ಭಾವಚಿತ್ರವಿರುವ ಕಾಗದದಲ್ಲಿ ಮಾಂಸ ಪ್ಯಾಕಿಂಗ್: ಅನ್ಯಧರ್ಮೀಯ ಅರೆಸ್ಟ್
Tuesday, July 5, 2022
ಉತ್ತರ ಪ್ರದೇಶ: ಹಿಂದೂ ದೇವತೆಗಳ ಭಾವಚಿತ್ರವಿರುವ ಕಾಗದದಲ್ಲಿ ಕೋಳಿ ಮಾಂಸ ಕಟ್ಟಿ ಕೊಟ್ಟು ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿರುವ ಆರೋಪದ ಮೇಲೆ ಅನ್ಯಧರ್ಮೀಯ ಚಿಕನ್ ವ್ಯಾಪಾರಸ್ಥನನ್ನು ಪೊಲೀಸರು ಉತ್ತರ ಪ್ರದೇಶದ ಸಂಭಲ್ ನಲ್ಲಿ ಅರೆಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಸಂಭಲ್ ನ ಚಿಕನ್ ವ್ಯಾಪಾರಿ ತಾಲೀಬ್ ಹುಸೇನ್ ಬಂಧಿತ ವ್ಯಾಪಾರಿ.
ಈತ ಭಾನುವಾರ ಹಿಂದೂ ದೇವತೆಗಳ ಭಾವಚಿತ್ರವಿರುವ ಕಾಗದದಲ್ಲಿ ಚಿಕನ್ ಅನ್ನು ಪೊಟ್ಟಣ ಕಟ್ಟಿ ಕೊಡುತ್ತಿದ್ದ. ಈತನ ಮೇಲೆ ಈ ಬಗ್ಗೆ ಕೆಲವರು ದೂರು ಕೊಟ್ಟ ಬಳಿಕ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಆರೋಪದಲ್ಲಿ ಉತ್ತರ ಪ್ರದೇಶ ರಾಜ್ಯದ ಪೊಲೀಸರು ಬಂಧಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಪರಿಶೀಲನೆ ನಡೆಸಲು ಪೊಲೀಸರು ತಾಲಿಬ್ ಹುಸೇನ್ ನ ಚಿಕನ್ ಶಾಪ್ ಗೆ ತೆರಳಿದ್ದಾರೆ. ಆಗ ಆತ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲು ಬಂದಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದಲೇ ಆತ ಕೃತ್ಯ ಎಸಗಲೆತ್ನಿಸಿದ್ದಾನೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ತಾಲಿಬ್ ಹುಸೇನ್ ನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.