ಮಂಗಳೂರು: ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಶೋರೂಂನಲ್ಲಿ ಅಗ್ನಿ ಅವಘಡ: ಸುಟ್ಟುಕರಕಲಾದ ವಾಹನಗಳು!

ಮಂಗಳೂರು: ನಗರದ ನಾಗುರಿಯಲ್ಲಿನ ಇಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋರೂಂನಲ್ಲಿ ಇಂದು ಬೆಳಗ್ಗೆ ಸಂಭವಿಸಿರುವ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಇಲೆಕ್ಟ್ರಿಕ್ ಸ್ಕೂಟರ್ ಗಳು ಸುಟ್ಟುಕರಲಾಗಿದೆ.

ಪ್ರಶಾಂತ್ ಎಂಬವರ ಮಾಲಕತ್ವದ ಒಕಿನವ ಇಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಈ ಅಗ್ನಿ ಅವಘಡ ನಡೆದಿದೆ. ಅಗ್ನ ಅವಘಡದ ಪರಿಣಾಮ ಇಡೀ ಕಟ್ಟಡವು ದಟ್ಟ ಹೊಗೆ ಯಲ್ಲಿ ತುಂಬಿಕೊಂಡಿತ್ತು. ಈ ಕಟ್ಟಡದ ಮೇಲಿನ ಅಂತಸ್ತಿನಲ್ಲಿ ಕಟ್ಟಡದ ಮಾಲಕರ ಕುಟುಂಬ ವಾಸವಾಗಿತ್ತು. ಆದರೆ ಯಾವುದೇ ಸಾವು - ನೋವು ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯವನ್ನು ನಡೆಸಿದೆ. 


ಬೆಳಗ್ಗೆ 8 ಗಂಟೆಯಿಂದಲೇ ಈ ಕಟ್ಟಡದಲ್ಲಿ ಆಗಾಗ ವಿದ್ಯುತ್ ಪವರ್ ಕಟ್ ಆಗೋದು ಮತ್ತೆ ಬರೋದು ಆಗುತ್ತಿತ್ತು. ಆದರೆ 9ಗಂಟೆಯ ಹೊತ್ತಿಗೆ ಇಲೆಕ್ಟ್ರಿಕ್ ವಾಹನದ ಶೋರೂಂ ಒಳಗಿನಿಂದ ಹೊಗೆ ಕಾಣಿಸಲಾರಂಭಿಸಿದೆ. ತಕ್ಷಣ ಎಚ್ಚೆತ್ತ ನಾವು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದೇವೆ ಎಂದು ಕಟ್ಟಡದ ಮಾಲಕ ಸಿರಾಜ್ ಮಾಹಿತಿ ನೀಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu