ಮಂಗಳೂರು: ಕಂಟೈನರ್ ಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಮತ್ತೀರ್ವರಿಗೆ ಗಾಯ

ಮಂಗಳೂರು: ಕಾರೊಂದು ಕಂಟೈನರ್ ಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಸಹ ಸವಾರರೀರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮುಂಜಾನೆ ನಗರ ಹೊರವಲಯದ ರಾ.ಹೆ.75ರ ಅಡ್ಯಾರ್ ಕಣ್ಣೂರು ಬಳಿ ಸಂಭವಿಸಿದೆ. 

ಮಂಜೇಶ್ವರ ಬಳಿಯ ಕುಂಜತ್ತೂರು ನಿವಾಸಿ ಇಬ್ರಾಹೀಂ(32) ಮೃತಪಟ್ಟ ಕಾರು‌ ಚಾಲಕ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಇಬ್ರಾಹಿಂ ಹಾಗೂ ಮತ್ತೀರ್ವರು ಕಾರಿನಲ್ಲಿ ಕುಂಜತ್ತೂರಿನಿಂದ ಬಂಟ್ವಾಳ ರಸ್ತೆಯಾಗಿ ಹೋಗುತ್ತಿದ್ದರು. ಆದರೆ ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಹಿನ್ನೆಲೆಯಲ್ಲಿ ಕಾರು ಡಿವೈಡರ್ ದಾಟಿ‌ದ ಸಂದರ್ಭ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಕಾರು ಚಲಾಯಿಸುತ್ತಿದ್ದ ಇಬ್ರಾಹೀಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತ್ತೀರ್ವರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

BREAKING NEWS
Loading latest news...
Join our WhatsApp Channel Powered By : Online Pudu