-->
ಕಾಲಿವುಡ್​ ನ ಸೂಪರ್​ಸ್ಟಾರ್​ ವಿಶಾಲ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ? : ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ

ಕಾಲಿವುಡ್​ ನ ಸೂಪರ್​ಸ್ಟಾರ್​ ವಿಶಾಲ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ? : ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ

ಚೆನ್ನೈ: ಕಾಲಿವುಡ್​ ನ ಸೂಪರ್​ಸ್ಟಾರ್​ ವಿಶಾಲ್​ ತಮಿಳುನಾಡು, ಚೆನ್ನೈ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ ತಮ್ಮ ವರ್ಚಸ್ಸನ್ನು ಇರಿಸಿಕೊಂಡಿದ್ದಾರೆ. ವಿಶಾಲ್ ಅಭಿನಯದ ಅನೇಕ ಸಿನಿಮಾಗಳು ಬಾಲಿವುಡ್​ಗೆ ಡಬ್​​ ಆಗಿದೆ. ಸದ್ಯ ವಿಶಾಲ್​ 'ಲಾಠಿ' ಎಂಬ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ಲಾಠಿ ಸಿನಿಮಾವನ್ನು ನಟರಾದ ರಮಣ ಮತ್ತು ನಂದ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ನಟಿ ಸುನೈನಾ ಅವರು ವಿಶಾಲ್​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಲ್ಲದೆ ತಮಿಳುನಾಡಿನ ನಾಡಿಗರ ಸಂಗಮ ಚುನಾವಣೆಯಲ್ಲಿ ವಿಶಾಲ್​ ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನೂ ಗೆದ್ದುಕೊಂಡಿದ್ದಾರೆ.  ಇಂತಹ ವಿಶಾಲ್​ ವೈಯಕ್ತಿಕ ವಿಚಾರದಲ್ಲಿ ಇದೀಗ ಭಾರಿ ಸುದ್ದಿಯಲಿದ್ದಾರೆ. 

ಹೌದು, ವಿಶಾಲ್​ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆಂಬ ಚರ್ಚೆ ಜಾಲತಾಣದಲ್ಲಿ ಭಾರೀ ಜೋರಾಗಿ ನಡೆಯುತ್ತಿದೆ. ಅದಕ್ಕೆ ಕಾರಣವೇನೆಂದರೆ ವಿಶಾಲ್​ ಇದೀಗ ಮತ್ತೊಮ್ಮೆ ಅಂಕಲ್​ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ವಿಶಾಲ್​, 'ಸರಿ ನಾನು ಇನ್ನೇನು ಕೇಳಬಹುದು. ನಾನು ಮತ್ತೊಮ್ಮೆ ಅಂಕಲ್​ ಆಗುತ್ತಿರುವುದು ಸಂತೋಷದ ವಿಚಾರ. ನನ್ನ ಪ್ರೀತಿಯ ಸಹೋದರಿ ಐಶುಗೆ ಇಂದು ರಾಜಕುಮಾರಿ ಜನಿಸಿದ್ದಾಳೆ. ದಂಪತಿ ಮತ್ತು ಹೆಣ್ಣು ಮಗುವಿಗೆ ದೇವರು ಆಶೀರ್ವದಿಸಲಿ' ಎಂದಿದ್ದಾರೆ. ಇಷ್ಟೇ ಆಗಿದ್ದರೆ, ಏನು ಆಗುತ್ತಿರಲಿಲ್ಲ. ಆದರೆ, ಟ್ವೀಟ್​ನ ಕೊನೆಯಲ್ಲಿ “ಇನ್ಶಾ ಅಲ್ಲಾಹ್” ದೇವರ ಆಶೀರ್ವಾದ ಇರಲಿ ಎಂದು ಬರೆದಿದ್ದು, ಇದೇ ವಿಚಾರ ಇದೀಗ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. 

ಅನೇಕರು ವಿಶಾಲ್​ ಟ್ವೀಟ್​ಗೆ ಶುಭಕೋರುತ್ತಿದ್ದರೆ, ಇನ್ನು ಕೆಲವರು ವಿಶಾಲ್​ ಉಲ್ಲೇಖಿಸಿರುವ 'ಇನ್ಶಾ ಅಲ್ಲಾಹ್' ಪದದ ಬಗ್ಗೆ ಮಾತನಾಡುತ್ತಿದ್ದಾರೆ. ನಟ ವಿಶಾಲ್​ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ಚರ್ಚೆಗಳು ಜೋರಾಗಿದೆ. ಅಲ್ಲದೆ, ಇದೇ ವಿಚಾರಕ್ಕೆ ಕೆಲವು ವರದಿಗಳು ಸಹ ಆಗಿದೆ. ವಿಶಾಲ್ ಅವರು ಯಾವಾಗಲೂ ತಮ್ಮ ಟ್ವೀಟ್‌ನಲ್ಲಿ ದೇವರನ್ನು ಉಲ್ಲೇಖಿಸಲು ಹೆಸರುವಾಸಿಯಾಗಿದ್ದಾರೆ ಮತ್ತು ಅವರಿಗೆ ಹತ್ತಿರವಿರುವ ಕೆಲವು ಆಪ್ತ ಮೂಲಗಳ ಪ್ರಕಾರ ಅವರು ಎಲ್ಲಾ ಧರ್ಮಗಳನ್ನು ಒಂದೇ ಮಟ್ಟದಲ್ಲಿ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ. ಆದರೂ ಅವರು ಮಾಡಿರುವ ಟ್ವೀಟ್​ ಒಂದು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100