-->

ಖರೀದಿಸಿದ ಮೂರೇ ತಿಂಗಳಿಗೆ ಇಲೆಕ್ಟ್ರಿಕ್ ಬೈಕ್ ಅನ್ನು ಸುಟ್ಟು ಹಾಕಿದ ಮಾಲಕ

ಖರೀದಿಸಿದ ಮೂರೇ ತಿಂಗಳಿಗೆ ಇಲೆಕ್ಟ್ರಿಕ್ ಬೈಕ್ ಅನ್ನು ಸುಟ್ಟು ಹಾಕಿದ ಮಾಲಕ

ಚೆನ್ನೈ: ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿರುವ ಇಲೆಕ್ಟ್ರಿಕ್ ಬೈಕ್​​ ಗಳ ಗುಣಮಟ್ಟದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಖರೀದಿಸಿದ ಕೆಲವೇ ದಿನಗಳಲ್ಲಿ ಬೈಕ್​​ ಕೆಟ್ಟುಹೋಗುತ್ತಿರುವುದರಿಂದ ವಾಹನ ಕೊಂಡವರು ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆದ್ದರಿಂದ ಇಲೆಕ್ಟ್ರಿಕ್ ಬೈಕ್ ಖರೀದಿಸಿರುವ ಗ್ರಾಹಕರಿಗೆ ಹಣವೂ ಇಲ್ಲ, ಬೈಕೂ ಇಲ್ಲದಂತಾಗಿದೆ. 

ಇದೇ ರೀತಿ ಗುಣಮಟ್ಟ ಚೆನ್ನಾಗಿದೆ ಎಂದು ನಂಬಿ ಖರೀದಿಸಿದ ಕೆಲವೇ ತಿಂಗಳಲ್ಲಿ ಇಲೆಕ್ಟ್ರಿಕ್ ಬೈಕ್​​ ಕೆಟ್ಟುಹೋಗಿದೆ. ಈ ಹಿನ್ನೆಲೆಯಲ್ಲಿ ಬೈಕ್ ಕೊಂಡವನೊಬ್ಬ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಅದನ್ನು ಸುಟ್ಟು ಹಾಕಿರುವ ವೀಡಿಯೋವೊಂದು ಭಾರೀ ವೈರಲ್​ ಆಗುತ್ತಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಓಲಾ ಕಂಪೆನಿಯ ಇಲೆಕ್ಟ್ರಿಕ್ ಬೈಕ್​ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಸಂಸ್ಥೆಯೇ 1400 ಕ್ಕೂ ಅಧಿಕ ಬೈಕನ್ನು ಹಿಂಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಗ್ರಾಹಕರೂ ಕೂಡ ಇಷ್ಟಪಟ್ಟು ಖರೀದಿಸಿರುವ ಬೈಕ್​​ ಅಲ್ಪ ದಿನವೂ ಬಾಳಿಕೆ ಬರಲಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ತಮಿಳುನಾಡಿದ ಪೃಥ್ವಿರಾಜ್​ ಎಂಬ ವ್ಯಕ್ತಿ ಜನವರಿಯಲ್ಲಿ ಇಲೆಕ್ಟ್ರಿಕ್​ ಬೈಕ್​ ಅನ್ನು ಖರೀದಿಸಿದ್ದಾರೆ. ಆ ವೇಳೆ ಸಂಸ್ಥೆ ಬೈಕ್​ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿತ್ತು. ಆದರೆ ಖರೀದಿಸಿದ ಮೂರೇ ತಿಂಗಳಿಗೆ ಬಣ್ಣ ಬಯಲಾಗಿತ್ತು. ಹಾಗಾಗಿ ಬೈಕನ್ನೇ ಸುಟ್ಟುಹಾಕುತ್ತಿದ್ದೇನೆ ಎಂದು ಹೇಳಿದ್ದಾನೆ. 

Ads on article

Advertise in articles 1

advertising articles 2

Advertise under the article