-->
Drinking Cold Water?- ಭೋಜನದ ಬಳಿಕ ತಣ್ಣೀರು ಕುಡಿಯುತ್ತೀರಾ..? ಹಾಗಾದ್ರೆ ತಪ್ಪದೆ ಈ ಸುದ್ದಿ ಓದಲೇ ಬೇಕು...

Drinking Cold Water?- ಭೋಜನದ ಬಳಿಕ ತಣ್ಣೀರು ಕುಡಿಯುತ್ತೀರಾ..? ಹಾಗಾದ್ರೆ ತಪ್ಪದೆ ಈ ಸುದ್ದಿ ಓದಲೇ ಬೇಕು...

ಭೋಜನದ ಬಳಿಕ ತಣ್ಣೀರು ಕುಡಿಯುತ್ತೀರಾ..? ಹಾಗಾದ್ರೆ ತಪ್ಪದೆ ಈ ಸುದ್ದಿ ಓದಲೇ ಬೇಕು...
ಬಿರು ಬಿಸಿಲ ಹೊತ್ತಿಗೆ ಸಾಮಾನ್ಯವಾಗಿ ಎಲ್ಲರೂ ತಂಪಾದ ಪಾನೀಯ, ಕೋಲ್ಡ್ ಡ್ರಿಂಕ್ಸ್‌ ಬಯಸುತ್ತಾರೆ. ಇದರಿಂದ ಶರೀರ ತಂಪಾಗಿ ಮನಸ್ಸಿಗೆ ಉಲ್ಲಾಸವಾಗುತ್ತದೆ ಎಂಬುದು ಹೆಚ್ಚಿನವರ ಅನಿಸಿಕೆ...ಹಾಗೆಯೇ, ಭೋಜನವಾದ ಬಳಿಕ ತಣ್ಣೀರು (ಕೋಲ್ಡ್ ವಾಟರ್) ಕುಡಿಯುತ್ತಾರೆ. ಕೆಲವರಿಗಂತೂ ಅದು ತುಂಬಾ ಇಷ್ಟ.ಆದರೆ, ಅದು ಸಾಕಷ್ಟು ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

ಉರಿ ಬಿಸಿಲಿಗೆ ಬಿಸಿ ಬಿಸಿ ಊಟ ಮಾಡಿದರೆ, ಶರೀರದಿಂದ ಜಲಪಾತದಂತೆ ಬೆವರು ಸುರಿಯುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚಾಗಿ ತಂಪಾದ ಪಾನೀಯಗಳನ್ನು ಬಯಸುತ್ತಾರೆ. ಆದರೆ, ಊಟವಾದ ತಕ್ಷಣವೇ ಕೋಲ್ಡ್ ನೀರು ಕುಡಿಯುವುದು ಆರೋಗ್ಯಕ್ಕೆ ಹಿತಕರವಲ್ಲ ಎಂಬುದು ಆರೋಗ್ಯ ತಜ್ಞರ ಅಭಿಮತ.ಆಹಾರ ಸೇವನೆ ಯಾ ಭೋಜನದ ತಕ್ಷಣ ಕೋಲ್ಡ್ ವಾಟರ್ ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶ ಹಾಗೆಯೇ ಉಳಿದು ಬಿಡುತ್ತದೆ. ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ. ಪಚನ ಕ್ರಿಯೆ ತ್ರಾಸದಾಯಕವಾಗಿ ತಿಂದಿರುವ ಆಹಾರ ಪದಾರ್ಥಗಳು ಜೀರ್ಣವಾಗದು.ಅದೇ ರೀತಿ, ಅಂಗಾಂಗಗಳಿಗೆ ಏಕಾಏಕಿ ಕೋಲ್ಡ್ ನೀರು ಹರಿದರೆ, ದೈಹಿಕ ತಾಪಮಾನದಲ್ಲಿ ಬದಲಾವಣೆ ಆಗಿ ತಲೆ ತಿರುಗುವ ಸಮಸ್ಯೆ ಸೃಷ್ಟಿಯಾಗಬಹುದು. ಅಲ್ಲದೆ, ತಣ್ಣೀರು ದೇಹದ ಚಯಾಪಚಯಕ್ಕೆ ಅಡ್ಡಿಯಾಗ ಬಲ್ಲುದು.ತಲೆನೋವು, ಮೈಗ್ರೇನ್‌ಗೂ ಕೋಲ್ಡ್ ನೀರು ಕಾರಣವಾಗಬಹುದು. ತಂಪು ಪಾನೀಯದಿಂದ ಶರೀರ ದುರ್ಬಲವಾಗುತ್ತದೆ. ಮೆದುಳಿನ ಕಾರ್ಯಗಳನ್ನು ಇದು ಸ್ತಂಬನ ಮಾಡಬಲ್ಲುದು. ಕೆಲವರಿಗೆ ತಲೆ ತಿರುಗುವ ಅನುಭವವಾಗಲೂ ಬಹುದು.ತಂಪು ನೀರಿನ ಸೇವನೆ ನರಗಳ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಹೃದಯ ಬಡಿತದಲ್ಲಿ ಅಸ್ಥಿರತೆ ಉಂಟಾಗಬಹುದು. ನರಗಳ ಕಾರ್ಯಕ್ಕೆ ಅಡ್ಡಿಯಾದರೆ, ಹೃದಯದ ಬಡಿತ ನಿಧಾನವಾಗುವ ಅಪಾಯ ಎದುರಾಗಬಹುದು.


ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಹಾಗೆ, ಯಾವುದೂ ಮಿತಿ ಮೀರಿದರೆ ಅಪಾಯ ಖಂಡಿತ. ಅದೇ ರೀತಿ, ಕೋಲ್ಡ್ ನೀರು ಬಗ್ಗೆಯೂ ಜಾಗರೂಕರಾಗಿರಿ. ಮಿತಿ ಬಿಟ್ಟು ಕೋಲ್ಡ್ ನೀರು ಕುಡಿಯಬಾರದು. ತೀವ್ರ ಆಯಾಸದ ವೇಳೆ ಏಕಾಏಕಿ, ಕೋಲ್ಡ್ ನೀರು ಕುಡಿಯುವ ಅಭ್ಯಾಸ ಕೂಡ ಉತ್ತಮವಲ್ಲ.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242