ಉಳ್ಳಾಲ: ಯುವಕನಿಗೆ ನಾಲ್ವರ ತಂಡದಿಂದ ಚೂರಿ ಇರಿತ

ಉಳ್ಳಾಲ: ಯುವಕನೋರ್ವನ ಮೇಲೆ ದಾಳಿ ನಡೆಸಿರುವ ನಾಲ್ವರ ತಂಡವೊಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಮಸೀದಿ ಬಳಿ ನಡೆದಿದೆ. 

ಉಳ್ಳಾಲದ ಕೋಡಿ ನಿವಾಸಿ ಅಲ್ ಸದೀನ್ (24) ಚೂರಿ ಇರಿತಕ್ಕೊಳಗಾದ ಯುವಕ.

ಅಲ್ ಸದೀನ್ ಮಸೀದಿ ಸಮೀಪ‌ದಲ್ಲಿದ್ದ ಸಂದರ್ಭ ನಾಲ್ವರ ತಂಡವೊಂದು ಆತನ ಮೇಲೆ ದಾಳಿ ನಡೆಸಿ, ಚೂರಿಯಿಂದ ಆತನ ಬೆನ್ನಿನ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದೆ. ಮಾಹಿತಿಗಳ ಪ್ರಕಾರ ಇವರೆಲ್ಲರೂ ಸ್ನೇಹಿತರಾಗಿದ್ದು, ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಯುವತಿಯೋರ್ವಳ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ.

ದಾಳಿಗೊಳಗಾದ ಅಲ್ ಸದೀನ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಕೆಲ ತಿಂಗಳುಗಳ ಹಿಂದೆ ಉಳ್ಳಾಲ ಠಾಣಾ ಪೊಲೀಸ್ ವಾಹನಕ್ಕೆ ಬಾಟಲಿಯಿಂದ ದಾಳಿ ನಡೆಸಿರುವ ಪ್ರಕರಣವೂ ಇರುವುದಾಗಿ‌ ತಿಳಿದು ಬಂದಿದೆ. ದೇರಳಕಟ್ಟೆ ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಶಶಿ ಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.
BREAKING NEWS
Loading latest news...
Join our WhatsApp Channel Powered By : Online Pudu