ಬ್ಯಾಂಕ್ ಮ್ಯಾನೇಜರ್ ನಿಂದ 1.50 ಕೋಟಿ ರೂ. ವಂಚನೆ : ಆರೋಪಿ ಪರಾರಿ

ಉತ್ತರಕನ್ನಡ: ರಾಷ್ಟ್ರೀಕೃತ ಬ್ಯಾಂಕ್​ವೊಂದರ ಮ್ಯಾನೇಜರ್​ 1.50 ಕೋಟಿ ರೂ. ದುರ್ಬಳಕೆ ಮಾಡಿ ತಲೆಮರೆಸಿಕೊಂಡಿರುವ ಪ್ರಕರಣವೊಂದು‌ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವರದಿಯಾಗಿದೆ. 

ಇದೀಗ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಭಟ್ಕಳದ ಬಜಾರ್​ನಲ್ಲಿ ಕಾರ್ಯಾಚರಿಸುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಶಾಖೆಯ ಮ್ಯಾನೇಜರ್ ಅನೂಪ್​ ಪೈ ಎಂಬಾತ ಆರೋಪಿ. ಮೂಲತಃ ಮಂಗಳೂರಿನ ಬೋಲ್ಪುಗುಡ್ಡೆ ಕಾವೂರು ನಿವಾಸಿಯಾಗಿರುವ ಅನೂಪ್​ ಪೈ, ಬ್ಯಾಂಕ್​ನ ಸಿಸ್ಟಮ್ ಸಸ್ಪೆನ್ಸ್ ಖಾತೆಗೆ ಖರ್ಚು ಹಾಕಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ಇದೀಗ ಆತ ತಲೆ ಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu