KPSC Rectruitment for 410 Post - ಕೆಪಿಎಸ್‌ಸಿ ನೇಮಕಾತಿ- ಪೌರಾಡಳಿತ ಇಲಾಖೆಯಲ್ಲಿ 410 ಹುದ್ದೆಗಳು

ಕೆಪಿಎಸ್‌ಸಿ ನೇಮಕಾತಿ- ಪೌರಾಡಳಿತ ಇಲಾಖೆಯಲ್ಲಿ 410 ಹುದ್ದೆಗಳು







ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಮಾರ್ಚ್ 19ರಂದು ಅಧಿಸೂಚನೆ ಹೊರಡಿಸಿದ್ದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 410 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕೋರಿ ಅಧಿಸೂಚನೆ ಹೊರಡಿಸಿದೆ.



ಅಧಿಸೂಚನೆಯ ವಿವರ ಹೀಗಿದೆ


ಇಲಾಖೆಯ ಹೆಸರು: ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳು


ಖಾಲಿ ಇರುವ ಹುದ್ದೆಗಳು:


ಕಿರಿಯ ಅಭಿಯಂತರರು - 89 ಹುದ್ದೆಗಳು


ಸಿವಿಲ್ ಕಿರಿಯ ಆರೋಗ್ಯ ನಿರೀಕ್ಷಕರು - 57 ಹುದ್ದೆಗಳು


ಎಲೆಕ್ಟ್ರಿಷಿಯನ್ ಗ್ರೇಡ್ 1 -02 ಹುದ್ದೆಗಳು


ಎಲೆಕ್ಟ್ರಿಷಿಯನ್ ಗ್ರೇಡ್-2 - 10 ಹುದ್ದೆಗಳು


ನೀರು ಸರಬರಾಜು ಆಪರೇಟರ್ - 89 ಹುದ್ದೆಗಳು


ಸಹಾಯಕ ನೀರು ಸರಬರಾಜು ಆಪರೇಟರ್- 163 ಹುದ್ದೆಗಳು



ಶೈಕ್ಷಣಿಕ ವಿದ್ಯಾರ್ಹತೆ: ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಲೇಬೇಕು ನಿಗದಿತ ವಿದ್ಯಾರ್ಹತೆಯನ್ನು ಹೊಂದದೇ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಪರಿಗಣಿಸಲಾಗುವುದಿಲ್ಲ. ಅದೇ ರೀತಿ ನಿಗದಿಪಡಿಸಿದ ವಿದ್ಯಾರ್ಹತೆಯ ಹೊರತು ಯಾವುದೇ ತತ್ಸಮಾನ ವಿದ್ಯಾರ್ಹತೆಯನ್ನು ಪರಿಗಣಿಸುವುದಿಲ್ಲ.



ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು, ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.



ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 31/ 3 / 2022


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 /4 / 2022


ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ: 30 /4/ 2022


ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಪ್ರಮಾಣಪತ್ರ ಅವಧಿಗೆ ಸಂಬಂಧಿಸಿದ ಪ್ರಮಾಣಪತ್ರ ಹಾಗೂ ಮೀಸಲಾತಿ ಕೋರಿದ್ದಾರೆ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸ ಬೇಕು.



ಅರ್ಜಿ ಸಲ್ಲಿಸುವ ಹಂತಗಳು ಅರ್ಜಿ ಸಲ್ಲಿಸಲು ಮೂರು ಹಂತಗಳಿವೆ.


ಮೊದಲನೇ ಹಂತ: ಪ್ರೊಫೈಲ್ ಸೃಜನೆ


ಎರಡನೇ ಹಂತ: ಅಪ್ಲಿಕೇಶನ್ ಸಲ್ಲಿಕೆ


ಮೂರನೇ ಹಂತ: ಅಪ್ಲಿಕೇಶನ್ ಆಧರಿಸಿ ಅರ್ಜಿ ಶುಲ್ಕ ಪಾವತಿ


ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೋಂದಣಿ ಸಂದರ್ಭದಲ್ಲಿ ತಾಂತ್ರಿಕ ತೊಂದರೆಗಳು ಉಂಟಾದರೆ ಈ ಕೆಳಗಿನ ಸಹಾಯವಾಣಿಯ ಸಂಪರ್ಕಿಸಬಹುದಾಗಿದೆ: 7406086807 / 6363754183