ಮಂಗಳೂರು: ಪ್ರಿಯಕರನೊಂದಿಗೆ ಸಂಭಾಷಣೆ ಮಾಡುತ್ತಲೇ ನೇಣಿಗೆ ಶರಣಾದ ಪ್ರೇಯಸಿ

ಉಳ್ಳಾಲ: ಪ್ರಿಯಕರನೊಂದಿಗೆ ಮಾತನಾಡುತ್ತಲೇ ಯುವತಿಯೋರ್ವಳು ನೇಣುಬಿಗಿದು ಮೃತಪಟ್ಡಿರುವ ಘಟನೆ ಕುಂಪಲ ಬಲ್ಯ ಎಂಬಲ್ಲಿ ನಡೆದಿದೆ.

ಕುಂಪಲ ಬಲ್ಯ ನಿವಾಸಿ ಹರ್ಷಿತಾ(21) ಮೃತಪಟ್ಟ ಯುವತಿ.

ಹರ್ಷಿತಾ ತನ್ನ ಪ್ರಿಯಕರನೊಂದಿಗೆ ವಿರಸಗೊಂಡು ಮೊಬೈಲ್ ನಲ್ಲಿ ಮಾತನಾಡುತ್ತಲೇ  ನೇಣಿಗೆ ಶರಣಾಗಿದ್ದಾಳೆ. ಇದರಿಂದ ಬೆದರಿದ ಸ್ಥಳೀಯ ಪ್ರಿಯಕರ ತಕ್ಷಣ ಸ್ಥಳಕ್ಕಾಗಮಿಸಿ ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.