ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 'ಆಪದ್ಬಾಧವ' ಆಸೀಫ್ ಮೇಲೆ ಮಂಗಳಮುಖಿಯರಿಂದ ಅಶ್ಲೀಲ ದಾಳಿ

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 'ಆಪದ್ಬಾಧವ' ಆಸೀಫ್ ಮೇಲೆ ನಿನ್ನೆ ತಡರಾತ್ರಿ ಮಂಗಳಮುಖಿಯರು ಅಶ್ಲೀಲವಾಗಿ ವರ್ತಿಸಿ ದಾಳಿ ನಡೆಸಿದ್ದಾರೆ.

ಸುರತ್ಕಲ್ ಎನ್ಐಟಿಕೆ ಬಳಿಯಿರುವ ಟೋಲ್ ಗೇಟ್ ವಿರುದ್ಧ ಕಳೆದ ಕೆಲದಿನಗಳಿಂದ ಸಾಮಾಜಿಕ ಕಾರ್ಯಕರ್ತ ಆಪದ್ಬಾಂಧವ ಆಸೀಫ್ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸುಮಾರು 7-10 ಮಂದಿ ಏಕಾಏಕಿ ಮಂಗಳಮುಖಿಯರು ತಡರಾತ್ರಿ 12.30 ಸುಮಾರಿಗೆ ಪ್ರತಿಭಟನೆ ನಡೆಸುವ ಸ್ಥಳಕ್ಕೆ ಆಗಮಿಸಿದ್ದಾರೆ. ಆ ಬಳಿಕ ಅವರು ಆಸೀಫ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಶ್ಲೀಲವಾಗಿ ವರ್ತಿಸಿ ದಾಳಿಗೆ ಯತ್ನಿಸಿದ್ದಾರೆ.

ತಕ್ಷಣ ಆಸೀಫ್ ಅವರು ಮಂಗಳಮುಖಿಯರ ದುರ್ವತನೆಯನ್ನು ಫೇಸ್ ಬುಕ್ಲೈವ್ ವೀಡಿಯೋ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರು ಸ್ಥಳದಲ್ಲಿದ್ದರೂ ಕೆಲ ಮಂಗಳಮುಖಿಯರು ಬಟ್ಟೆ ಎತ್ತಿ ಅಸಭ್ಯವಾಗಿ ವರ್ತಿಸಿದ್ದಾರೆ‌. ಅಲ್ಲದೆ ಅವರಿಗೆ ಪೊಲೀಸ್ ಮುಂಭಾಗವೇ ಬೆದರಿಕೆಯನ್ನು ಒಡ್ಡಿದ್ದಾರೆ. ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಈ ರೀತಿಯಲ್ಲಿ ಮಂಗಳಮುಖಿಯರನ್ನು ಛೂ ಬಿಡಲಾಗಿದೆ ಎಂದು ಆಸೀಫ್ ಆರೋಪಿಸಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu