ಬೆಂಗಳೂರು: ಪೋರ್ನ್ ವೆಬ್‌ಸೈಟ್‌ನಲ್ಲಿ ತನ್ನದೇ ಅಶ್ಲೀಲ ವೀಡಿಯೊ ನೋಡಿ ದಂಗಾದ ಯುವಕ.

ಬೆಂಗಳೂರು: ಪೋರ್ನ್ ವೆಬ್ ಸೈಟ್ ನಲ್ಲಿ ತನ್ನದೇ ಅಶ್ಲೀಲ ವೀಡಿಯೋವನ್ನು ಕಂಡು ಯುವಕನೊಬ್ಬನು ದಂಗಾಗಿದ್ದು, ಇದೀಗ ಈ ವಿಚಾರವಾಗಿ ಆತ ಸೆನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಬೆಂಗಳೂರಿನ ಆಸ್ಟಿನ್‌ಟೌನ್‌ನಲ್ಲಿ ವಾಸವಾಗಿರುವ 25 ವರ್ಷದ ಯುವಕ ದೂರು ನೀಡಿದಾತ. ಈ ಯುವಕ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ‌. ಈತ ತನ್ನ ಗೆಳತಿಯೊಂದಿಗೆ ನಗರದ ಹೊಟೇಲೊಂದರಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾನೆ. ಆ ದೃಶ್ಯಗಳನ್ನು ಯಾರೋ ವೀಡಿಯೋ ಚಿತ್ರೀಕರಣ ಮಾಡಿ ವಿವಿಧ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ವಿಚಾರ ಜ.21ರಂದು ಯುವಕನ ಗಮನಕ್ಕೆ ಬಂದಿದೆ. ಬಳಿಕ ಬೇರೆ ವೆಬ್‌ಸೈಟ್‌ಗಳಲ್ಲೂ ಈ ವೀಡಿಯೋ ಇರುವುದು ಪತ್ತೆಯಾಗಿದೆ.

ಈ ಅಶ್ಲೀಲ ವೀಡಿಯೋದಲ್ಲಿ ಮುಖ ಸರಿಯಾಗಿ ಕಾಣುತ್ತಿಲ್ಲವಾದರೂ, ದೇಹದಲ್ಲಿನ ಮಚ್ಚೆ ಹಾಗೂ ಇತರ ಗುರುತುಗಳು ತನಗೆ ಪೂರಕವಾಗಿವೆ. ಯಾರೋ ಉದ್ದೇಶ ಪೂರ್ವಕವಾಗಿಯೇ ತನ್ನ ಅಶ್ಲೀಲ ವೀಡಿಯೋವನ್ನು ಚಿತ್ರೀಕರಣ ಮಾಡಿ ಅಪ್‌ಲೋಡ್‌ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.