ಪ್ರೀತಿಸಿದಾತನನ್ನೇ ವಿವಾಹವಾಗಿದ್ದರೂ ಮದುವೆಯಾದ ನಾಲ್ಕೇ ದಿನಕ್ಕೆ ಯುವತಿ ಆತ್ಮಹತ್ಯೆ: ಕಾರಣ ನಿಗೂಢ!

ಚಿಕ್ಕಬಳ್ಳಾಪುರ: ಪ್ರೀತಿಸಿದಾತನನ್ನೇ ವಿವಾಹವಾಗಿ ಸಂತೋಷದ ಸಂಭ್ರಮದಲ್ಲಿ ತೇಲಬೇಕಿದ್ದ ಯುವತಿಯೋರ್ವಳು ಮದುವೆಯಾದ ನಾಲ್ಕೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ದುರಂತವೊಂದು ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಟ್ಟಹಳ್ಳಿ ನಿವಾಸಿ ವೀಣಾ (25) ಮೃತ ದುರ್ದೈವಿ ಯುವತಿ. ಈಕೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವೀಣಾ ತನ್ನ ಸಂಬಂಧಿ, ಯಲಹಂಕ ಬಾಗಲೂರು ಕ್ರಾಸ್ ನಿವಾಸಿ ಪುನೀತ್ ರಾಜ್​ ಎಂಬಾತನನ್ನು ಪ್ರೀತಿಸುತ್ತಿದ್ದಳು. ಐದು ದಿನಗಳ ಹಿಂದೆಯಷ್ಟೇ ಆತನೊಂದಿಗೆ ಆಕೆಯ ವಿವಾಹ ನೆರವೇರಿತ್ತು.  ಪ್ರೇಮವಿವಾಹವಾಗಿದ್ದರೂ ಈಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬ ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu