-->

ಪ್ರಖ್ಯಾತ ನಟನಿಗೆ ಆ್ಯಪಲ್ ವಾಚ್ ಬದಲಾಗಿ ಡೆಲಿವರಿಯಾಯ್ತು ಕಲ್ಲು: ಕಂಪೆನಿಗೆ ದಂಡ ವಿಧಿಸಿದ ಕೋರ್ಟ್

ಪ್ರಖ್ಯಾತ ನಟನಿಗೆ ಆ್ಯಪಲ್ ವಾಚ್ ಬದಲಾಗಿ ಡೆಲಿವರಿಯಾಯ್ತು ಕಲ್ಲು: ಕಂಪೆನಿಗೆ ದಂಡ ವಿಧಿಸಿದ ಕೋರ್ಟ್

ನವದೆಹಲಿ: ಆನ್​ಲೈನ್​ನಲ್ಲಿ ಆರ್ಡರ್ ಮಾಡಿರುವ ಪ್ರಾಡಕ್ಟ್​ ಗಳಿಗೆ ಬದಲಾಗಿ ಬೇರೆ ಪ್ರಾಡಕ್ಟ್​ ಬರುವ ಬಹಳ ಉದಾಹರಣೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಯಾವುದೋ ದುಬಾರಿ ಪ್ರಾಡಕ್ಟ್ಸ್ ಬದಲಾಗಿ ಸೋಪು, ಕಲ್ಲು ಮುಂತಾದವುಗಳನ್ನು ಪಾರ್ಸೆಲ್ ಬರುವುದು ಸುದ್ದಿಯಾಗುತ್ತಲೇ ಇರುತ್ತದೆ. 

ಇಂತಹ ಕಹಿ ಅನುಭವ ಜನಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಆಗುತ್ತಿರುತ್ತದೆ. ಸೆಲೆಬ್ರಿಟಿಗಳು ಕೂಡಾಇದಕ್ಕೆ ಹೊರತಾಗಿರೋಲ್ಲ ಎಂಬುದು ಈ ಸುದ್ದಿಯೇ ಸಾಕ್ಷಿ. ಪ್ರಖ್ಯಾತ ಬ್ರೆಜಿಲಿಯನ್​ ಕಲಾವಿದರೊಬ್ಬರಿಗೆ ಆನ್​ಲೈನ್​ ಶಾಪಿಂಗ್​ ವೇಳೆ ಕಹಿ ಅನುಭವವಾಗಿದೆ. ಅವರು ದುಬಾರಿ ಆ್ಯಪಲ್​ ವಾಚ್​ ಬುಕ್​ ಮಾಡಿದ್ದರು ಆದರೆ ಕಲ್ಲು ಪಾರ್ಸೆಲ್ ಬಂದಿದೆ. ಈ ಬಗ್ಗೆ ಅವರು ನ್ಯಾಯಾಲಯದ ಮೆಟ್ಟಲೇರಿದ್ದರು. 

ಪ್ರಖ್ಯಾತ ಕಲಾವಿದ ಮುರಿಲ್ಲೋ ಬೆನಿಸಿಯೋ (50) ಆನ್​ಲೈನ್​ನಲ್ಲಿ ಆ್ಯಪಲ್​ 6ನೇ ಸರಣಿಯ ಸ್ಮಾರ್ಟ್​ವಾಚ್​ ಅನ್ನು ಬುಕ್​ ಮಾಡಿದ್ದರು. ಅದಕ್ಕಾಗಿ ಅವರು 530 ಡಾಲರ್​ (40 ಸಾವಿರ ರೂ.) ಪಾವತಿಸಿದ್ದರು. ಬುಕ್​ ಮಾಡಿದ 12 ದಿನಗಳ ಬಳಿಕ ಅವರಿಗೆ ವಾಚ್​ ಪಾರ್ಸೆಲ್​ ಡೆಲಿವರಿಯಾಗಿದೆ. ಖುಷಿಯಿಂದಲೇ ಬಾಕ್ಸ್​ ತೆರೆದ ಕಲಾವಿದ ಮುರಿಲ್ಲೋ ಬೆನಿಸಿಯೋ ಆಘಾತವಾಗಿದೆ. ಯಾಕೆಂದರೆ, ಅವರಿಗೆ ವಾಚ್​ ಬದಲಿಗೆ ಕಲ್ಲು ಡೆಲಿವರಿಯಾಗಿತ್ತು. 

ಈ ಬಗ್ಗೆ ಮುರಿಲ್ಲೋ ಬೆನಿಸಿಯೋ ಅವರು ಕೊರ್ರೆಫೊರ್​ ಹೆಸರಿನ ಆನ್​ಲೈನ್​ ಕಂಪೆನಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪೆನಿ ನಿರಾಕರಿಸಿದೆ. ಇದರಿಂದ ರೋಸಿಹೋದ ಮುರಿಲ್ಲೋ ಬೆನಿಸಿಯೋ ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. 

ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿಯಾಗಿರುವ ಓರ್ವ ಸೆಲೆಬ್ರಿಟಿಗೆ, ಸ್ಟಾರ್ ಹೀರೋಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, ಕೊನೆಗೆ ಬೆನಿಸಿಯೋ ಅವರು ಕೇಸ್​ ಗೆದ್ದಿದ್ದಾರೆ. ಮೊದಲೇ ಪಾವತಿಸಿದ್ದ 530 ಡಾಲರ್​ಗೆ ಹೆಚ್ಚುವರಿಯಾಗಿ 1500 ಡಾಲರ್​ ಕೊಡುವಂತೆ ಕೋರ್ಟ್​ ಕಂಪೆನಿಗೆ ಆದೇಶಿಸಿದೆ.

Ads on article

Advertise in articles 1

advertising articles 2

Advertise under the article