ಮಗು ಅಪಹರಣ ಆರೋಪದಿಂದ ಮಾನಕ್ಕೆ ಅಂಜಿ ಒಂದೇ ಕುಟುಂಬದಿಂದ ಆತ್ಮಹತ್ಯೆ ಯತ್ನ: ನಾಲ್ವರ ಸಾವು

ಕೋಲಾರ: ಮಗುವೊಂದರ ಅಪಹರಣ ಆರೋಪದಿಂದ ಬೇಸತ್ತು ಮಾನಕ್ಕೆ ಅಂಜಿ ನಗರದ ಕಾರಂಜಿಕಟ್ಟೆ ಬಡಾವಣೆಯ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಾಲ್ವರು ಮೃತಪಟ್ಟಿದ್ದಾರೆ.

ನಗರದ ಕಾರಂಜಿಕಟ್ಟೆ ಬಡಾವಣೆಯ ಈ ಕುಟುಂಬದ ಎಲ್ಲರೂ ವಿಷ ಸೇವನೆ ಮಾಡಿ ನರಳಾಡುತ್ತಿದ್ದರು. ತಕ್ಷಣ ಐವರನ್ನೂ ನೆರೆ ಹೊರೆಯವರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಸೋಮವಾರ ಈ ಐವರಲ್ಲಿ ನಾಲ್ವರು ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

ಮುನಿಯಪ್ಪ(70), ಬಾಬು (45), ಗಂಗೋತ್ರಿ(17) ಹಾಗೂ ನಾರಾಯಣಮ್ಮ (65)  ಮೃತಪಟ್ಟವರು. ಉಳಿದಿರುವ ಪುಷ್ಪಾ(33) ಎಂಬಾಕೆಯ ಪರಿಸ್ಥಿತಿಯು ಚಿಂತಾಜನಕವಾಗಿದ್ದು, ಆಸ್ಪತ್ರೆಯ ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರವಿವಾರ ಸಂಜೆ ಕುಟುಂಬದ  ಎಲ್ಲರೂ ಒಟ್ಟಾಗಿ ವಿಷ ಸೇವನೆ ನಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಪುಷ್ಪಾ ಎಂಬಾಕೆ ಗಂಡು ಮಗುವೊಂದನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಆರೋಪ ಹೊತ್ತಿದ್ದರು‌. ಇದೇ ಕುಟುಂಬದ ಎಲ್ಲರೂ ಆತ್ಮಹತ್ಯೆಗೆ ಕಾರಣವಾಗಿದೆ.

ಈ ವಿಚಾರವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ವಿಚಾರಣೆಯೂ ನಡೆದಿತ್ತು. ಕೇಸ್ ದಾಖಲಾಗಿದಕ್ಕೆ ಮಾನಕ್ಕೆ ಅಂಜಿ ಎಲ್ಲರೂ ಆತ್ಮಹತ್ಯೆಗೆ ಯತ್ನಿಸಿದ್ದರು.

ಮೃತರ ಸಾವಿನ ಕುರಿತಂತೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
BREAKING NEWS
Loading latest news...
Join our WhatsApp Channel Powered By : Online Pudu