-->

ಮತ್ತೆ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ MANGALURU,,, ನಾಗನ ಕಲ್ಲಿಗೆ ಹಾನಿ, ಬಸ್ ಗೆ ಕಲ್ಲಿನ ಬಳಿಕ ಮಸೀದಿಯಲ್ಲಿ ದುಷ್ಕೃತ್ಯಕ್ಕೆ ಯತ್ನ—ಬೇಕಾಗಿದೆ ಶಾಂತಿ

ಮತ್ತೆ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ MANGALURU,,, ನಾಗನ ಕಲ್ಲಿಗೆ ಹಾನಿ, ಬಸ್ ಗೆ ಕಲ್ಲಿನ ಬಳಿಕ ಮಸೀದಿಯಲ್ಲಿ ದುಷ್ಕೃತ್ಯಕ್ಕೆ ಯತ್ನ—ಬೇಕಾಗಿದೆ ಶಾಂತಿ

 


 

ಮಂಗಳೂರು: ಚುನಾವಣೆ ಸನಿಹಕ್ಕೆ ಬರುತ್ತಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುವುದು ಹಿಂದಿನಿಂದ ನಡೆದುಕೊಂಡು ಬಂದಿರುವಂತಹದು. ಸಮಾಜದ ಸ್ವಾಸ್ಥ್ಯ ಕೆಡಿಸುವ ಘಟನೆಗಳು ಒಂದರ ಮೇಲೊಂದರಂತೆ ನಡೆದು  ಕೋಮುಬಣ್ಣ ಪಡೆದು ಅದು ಚುನಾವಣೆವರೆಗೂ ಮುಂದುವರಿಯುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದೀಗ ಮತ್ತೆ ಮಂಗಳೂರಿನಲ್ಲಿ ಅಹಿತಕರ ಘಟನೆಗಳು ಒಂದರ ಹಿಂದೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

 

ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜೆಹಾದ್ ಎಂಬ ವಿಚಾರ ಮುನ್ನೆಲೆಗೆ ಬಂದು ಹಲವೆಡೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಬೆಳಕಿಗೆ ಬರುತ್ತಲೆ ಇದ್ದವು. ಅದರ ಬಳಿಕ ಧಾರ್ಮಿಕ ಕೇಂದ್ರಗಳಲ್ಲಿ ಅನಾಚಾರಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ.  ಇತ್ತೀಚೆಗೆ ಕೂಳೂರಿನಲ್ಲಿ ನಾಗದೇವರ ಕಟ್ಟೆಯಲ್ಲಿದ್ದ ನಾಗನ ಮೂರ್ತಿಗಳನ್ನು ಹಾನಿ ಮಾಡಿದ ಘಟನೆ ನಡೆದಿತ್ತು. ಇದಾದ ಕೆಲವೆ ದಿನಗಳಲ್ಲಿ ಕೋಡಿಕಲ್ ನ ನಾಗನ ಕಟ್ಟೆಯಲ್ಲಿನ ನಾಗನ ಮೂರ್ತಿಗೆ ಹಾನಿ ಮಾಡಿದ ಪ್ರಕರಣ ನಡೆದಿದೆ. ಈ ವಿಚಾರ ಬೆಳಕಿಗೆ ಬಂದ ದಿನವೆ ಬಸ್ ವೊಂದಕ್ಕೆ ಕಲ್ಲೆಸೆದು ಹಾನಿ ಮಾಡಲಾಗಿದೆ. ಆದಿತ್ಯವಾರ ರಾತ್ರಿ ಕುರ್ನಾಡುವಿನ ಮಸೀದಿಯ ಬಳಿ ಮೂವರು ಯುವಕರು ಘೋಷಣೆ ಕೂಗಿ ದುಷ್ಕೃತ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ. ಕೋಡಿಕಲ್ ನಲ್ಲಿ ನಾಗನ ಕಲ್ಲಿಗೆ ಮಾಡಿದ ಹಾನಿಯಿಂದ ಆಕ್ರೋಶಗೊಂಡಿರುವ ಬಜರಂಗದಳ ಕೋಡಿಕಲ್ ಬಂದ್ ಗೆ ಕೂಡ ಕರೆ ಕೊಟ್ಟಿದೆ.

 

ಇದೆಲ್ಲ ಘಟನೆಗಳು ಜಿಲ್ಲೆಯ ಶಾಂತಿಪ್ರಿಯರ ಆತಂಕಕ್ಕೆ ಕಾರಣವಾಗಿದೆ. ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಇಡೀ ಜಿಲ್ಲೆಯಲ್ಲಿ ಅಶಾಂತಿಯ ವಾತವರಣ ಸೃಷ್ಟಿಯಾಗದಿರಲಿ ಎಂದು ಸಾರ್ವಜನಿಕರು ಬಯಸುತ್ತಿದ್ದಾರೆ.  ಇಂತಹ ಘಟನೆಗೆ ಮರುಕಳಿಸದಂತೆ, ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸದಂತೆ ಎಲ್ಲರೂ ಕೈಜೋಡಿಸಬೇಕಾಗಿದೆ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article