-->
ತಮಾಷೆಗಾಗಿ ಮಾಡಿರುವ ಕೆಲಸವೊಂದು ವ್ಯಕ್ತಿಯ ಪ್ರಾಣವನ್ನೇ ಕಸಿಯಿತು!

ತಮಾಷೆಗಾಗಿ ಮಾಡಿರುವ ಕೆಲಸವೊಂದು ವ್ಯಕ್ತಿಯ ಪ್ರಾಣವನ್ನೇ ಕಸಿಯಿತು!

ಕೋಲ್ಕತಾ: ತಮಾಷೆಗಾಗಿ ಸಹೋದ್ಯೋಗಿಗಳು ಮಾಡಿರುವ ಕೆಲಸವೊಂದು ವ್ಯಕ್ತಿಯೊಬ್ಬನ ಪ್ರಾಣವನ್ನೇ ಕಸಿದಿರುವ ಘಟನೆ ಕೋಲ್ಕತಾದ ಹೂಗ್ಲಿಯಲ್ಲಿ ನಡೆದಿದೆ.

ಹೂಗ್ಲಿಯ ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದವರು, ರೆಹಮತ್ ಅಲಿ ಎಂಬವರ ಗುದದ್ವಾರಕ್ಕೆ ಏರ್‌ಪಂಪ್‌ ಇಟ್ಟು ಪಂಪ್‌ ಮಾಡಿದ್ದಾರೆ. ಈ ಸಂದದರ್ಭ ರೆಹಮತ್ ಅಲಿ ಎಷ್ಟೇ ವಿರೋಧಿಸಿದರೂ ಸಹೋದ್ಯೋಗಿಗಳು ಬಿಡದೆ ತಮಾಷೆಗಾಗಿ ಪಂಪ್ ಮಾಡಿಯೇ ಬಿಟ್ಟಿದ್ದಾರೆ. ಇದೇ ಅಲಿ ಪ್ರಾಣಕ್ಕೆ ಮುಳುವಾಗಿದೆ. 

ಮಿಲ್ ನಲ್ಲಿ ರೆಹಮತ್ ಅಲಿ ನೈಟ್ ಶಿಫ್ಟ್‌ನಲ್ಲಿ ಗಿರಣಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದರು. ಅವರನ್ನು ಹಿಡಿದುಕೊಂಡ ಇತರ ಸಹದ್ಯೋಗಿಗಳು ಏರ್‌ಪಂಪ್‌ ತಂದು ಅವರ ಗುದದ್ವಾರಕ್ಕೆ ಪಂಪ್‌ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಅಲಿ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಸಹದ್ಯೋಗಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ.

ಗುದದ್ವಾರದಿಂದ ಒತ್ತಡವಾಗಿ ಹಾಕಿರುವ ಗಾಳಿಯಿಂದ ಅಲಿ ಅವರ ಯಕೃತ್ತು ಸೇರಿದಂತೆ ಇತರ ಅಂಗಾಂಗಳು ಹಾನಿಯಾಗಿರುವ ಪರಿಣಾಮ, ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಇದೀಗ ಅವರ ಸಹದ್ಯೋಗಿಗಳ ಮೇಲೆ ಕೇಸ್‌ ದಾಖಲಾಗಿದೆ. ಪ್ರಮುಖ ಆರೋಪಿ ಶೆಹಜಾದಾ ಖಾನ್ ಪರಾರಿಯಾಗಿದ್ದಾನೆ. ಈ ಬಗ್ಗೆ ಮಿಲ್‌ ಮಾಲಕರು ಮೌನವಾಗಿದ್ದಾರೆಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article

holige copy 1.jpg