-->
OP - Pixel Banner ad
ಆಡುತ್ತಿದ್ದ ಬಾಲಕ ವಿದ್ಯುತ್ ಆಘಾತಕ್ಕೆ ಬಲಿ: ಅಟ್ಟಹಾಸ ಮೆರೆದ ಜವರಾಯ!

ಆಡುತ್ತಿದ್ದ ಬಾಲಕ ವಿದ್ಯುತ್ ಆಘಾತಕ್ಕೆ ಬಲಿ: ಅಟ್ಟಹಾಸ ಮೆರೆದ ಜವರಾಯ!

ಹಾವೇರಿ: ಇತ್ತೀಚೆಗೆ ಬೆಂಗಳೂರಿನಲ್ಲಿ ಇಬ್ಬರು ಬಾಲಕರು ವಿದ್ಯುತ್ ಆಘಾತಕ್ಕೆ ಬಲಿಯಾಗಿರುವ ಘಟನೆ ನೆನಪಿನಿಂದ ಮರೆಯಾಗುವ ಮುಂಚೆಯೇ ಹಾವೇರಿ ತಾಲ್ಲೂಕಿನ ಯಲಗಚ್ಚ ಗ್ರಾಮದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.

ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಗೆಳೆಯರೊಂದಿಗೆ ಆಡುತ್ತಿದ್ದ ಬಾಲಕನೊಬ್ಬ ವಿದ್ಯುತ್​ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ಹಾವೇರಿ ತಾಲ್ಲೂಕಿನ ಯಲಗಚ್ಚ ಗ್ರಾಮದ ಚೇತನ್ ಕಂಬಳಿ (14)ಮೃತ ಬಾಲಕ. ಮೂಲತಃ ನೆಗಳೂರು ಗ್ರಾಮದ ನಿವಾಸಿಯಾದ ಚೇತನ್​, ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಅಜ್ಜ-ಅಜ್ಜಿಯ ಊರಾದ ಯಲಗಚ್ಚದಲ್ಲಿ ವಾಸಿಸುತ್ತಿದ್ದ.

ಶಾಲೆಗೆ ರಜೆಯಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಮೇಲೆ ಗೆಳೆಯರೊಂದಿಗೆ ಚೇತನ್ ಆಟವಾಡುತ್ತಿದ್ದ. ಆ ವೇಳೆ ಆಕಸ್ಮಿಕವಾಗಿ ಆತನಿಗೆ ವಿದ್ಯುತ್​ ತಂತಿ ಸ್ಪರ್ಶಿಸಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾನೆ. ಗುತ್ತಲ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242