-->
ಸಂಬಂಧಿಯೋರ್ವರ ಫೋನ್ ನಂಬರ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿರುವ ನವವಿವಾಹಿತ ಜೋಡಿ!

ಸಂಬಂಧಿಯೋರ್ವರ ಫೋನ್ ನಂಬರ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿರುವ ನವವಿವಾಹಿತ ಜೋಡಿ!

ತುಮಕೂರು: ಇತ್ತೀಚೆಗಷ್ಟೇ ವಿವಾಹವಾಗಿದ್ದ ಜೋಡಿಯೊಂದು  ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದೆ. ಮಾತ್ರವಲ್ಲ,  ಸಂಬಂಧಿಕರೊಬ್ಬರ ದೂರವಾಣಿ ಸಂಖ್ಯೆ ಬರೆದಿಟ್ಟು ಮೃತಪಟ್ಟಿದ್ದಾರೆ. 

ತುಮಕೂರಿನ ವಿದ್ಯಾನಗರದಲ್ಲಿ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ. ಮೃತಪಟ್ಟ ಯುವಕನನ್ನು ಸಾಗರ್​(25) ಎಂದು ಗುರುತಿಸಲಾಗಿದ್ದು, ಆತನೊಂದಿಗೆ ನೇಣಿಗೆ ಕೊರಳೊಡ್ಡಿರುವ ಪತ್ನಿಯ ಹೆಸರು ಇನ್ನೂ ತಿಳಿದುಬಂದಿಲ್ಲ. 

ಇತ್ತೀಚೆಗಷ್ಟೇ ವಿವಾಹವಾಗಿದ್ದ ಈ ಜೋಡಿ ಪಶ್ಚಿಮಬಂಗಾಳದಿಂದ ಬಂದು ತುಮಕೂರಿನಲ್ಲಿ ನೆಲೆಸಿದ್ದರು ಎಂಬುದು ತಿಳಿದುಬಂದಿದೆ. ಮೃತಪಡುವ ಮುನ್ನ ಸಂಬಂಧಿಕರೊಬ್ಬರ ಫೋನ್ ನಂಬರ್ ಬರೆದಿಟ್ಟಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Ads on article

Advertise in articles 1

advertising articles 2

Advertise under the article