
ಅಪ್ರಾಪ್ತೆಯೊಂದಿಗೆ ಸೆಕ್ಸ್ ಮಾಡಿದ ಯುವಕ ನಗ್ನನಾಗಿದ್ದಾಗಲೇ ಆಕೆಯ ಪೋಷಕರ ಕೈಗೆ ಸಿಕ್ಕಿಬಿದ್ದ !
Sunday, October 10, 2021
ಮಂಗಳೂರು: ಅಪ್ರಾಪ್ತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ನಗ್ನವಾಗಿ ಆಕೆಯ ಮನೆಯ ಶೌಚಾಲಯದಿಂದ ಹೊರಬರುತ್ತಿದ್ದಾಗ ಬಾಲಕಿಯ ಹೆತ್ತವರೇ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಸಿಂಗಾಪುರದಲ್ಲಿ ನಡೆದಿದೆ.
24 ವರ್ಷದ ಟಿಯೋ ಯಾವೊ ಹಾಂಗ್ ಎಂಬ ಯುವಕ 15ರ ಬಾಲಕಿ ಜೊತೆ ಆಕೆಯ ಮನೆಯ ಶೌಚಾಲಯದಲ್ಲೇ ಲೈಂಗಿಕ ಕ್ರಿಯೆ ಮಾಡಿ ಬೆತ್ತಲಾಗಿ ಹೊರಬರುತ್ತಿದ್ದ. ಆಗ ಬಾಲಕಿಯ ತಂದೆ ಯುವಕನನ್ನು ಹಿಡಿದು ಕೆನ್ನೆಗೆ ಬಾರಿಸಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬರುವವರೆಗೆ ಯುವಕನನ್ನು ಬೆತ್ತಲಾಗಿಯೇ ಬಾಲಕಿಯ ಪೋಷಕರು ಹಿಡಿದಿಟ್ಟುಕೊಂಡಿದ್ದರು. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕ ಟಿಯೋ ಯಾವೊ ಹಾಂಗ್ ಈ ಅಪ್ರಾಪ್ತೆಯೊಂದಿಗೆ 3 ಬಾರಿ ಲೈಂಗಿಕ ಕ್ರಿಯೆ ಮಾಡಿರುವೆನೆಂದು ಒಪ್ಪಿಕೊಂಡಿದ್ದಾನೆ. ಯುವಕ ಮಾಡಿರುವ ತಪ್ಪಿಗೆ ನ್ಯಾಯಾಲಯ 1 ವರ್ಷ 11 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದೆ. ಆತನ ಹಳೆಯ ದೂರುಗಳನ್ನು ಪರಿಶೀಲಿಸಿ ಈ ಶಿಕ್ಷೆ ವಿಧಿಸಲಾಗಿದೆ. ಗ್ರಾಬ್ ಡ್ರೈವರ್ ಮತ್ತು ವೇರ್ಹೌಸ್ ಸಹಾಯಕನಾಗಿದ್ದ ಟಿಯೋ ಯಾವೊ ಹಾಂಗ್ ಬಾಲಕಿಯನ್ನು ಸಾಮಾಜಿಕ ಜಾಲತಾಣವಾಗಿರುವ ಮಿಚಾಟ್ ಮೂಲಕ ಪರಿಚಯವಾಗಿದ್ದನು. ಕಳೆದ ವರ್ಷ ಮೇ ಮತ್ತು ಅಕ್ಟೋಬರ್ ನಡುವೆ ಬಾಲಕಿ ಜೊತೆ ಎರಡು ವಾರಿ ಲೈಂಗಿಕ ಸಂಪರ್ಕ ಮಾಡಿದ್ದನೆಂದು ಹೇಳಿಕೊಂಡಿದ್ದಾನೆ.
ಅಲ್ಲದೆ 2019 ಅಕ್ಟೋಬರ್ ನಲ್ಲಿ, ಆರೋಪಿ ಇನ್ನೊಬ್ಬ ಅಪ್ರಾಪ್ತ ಗೆಳತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದನೆಂದು ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ವರ್ಷ ಜೂನ್ನಲ್ಲಿ ಮಿಚಾಟ್ ಮೂಲಕ ಈ 15 ವರ್ಷದ ಬಾಲಕಿಯ ಪರಿಚಯವಾಗಿ ಇಬ್ಬರ ನಡುವೆ ಸಲಿಗೆ ಬೆಳೆದಿದೆ. ಕಳೆದ ವರ್ಷ ಜೂನ್ 28 ರಂದು ಟಿಯೋ ಬಾಲಕಿಯನ್ನು ಭೇಟಿಯಾಗಲು ಹೇಳುತ್ತಾನೆ. ಆಗ ಅವಳು ಮನೆಯ ವಿಳಾಸವನ್ನು ಕೊಡುತ್ತಾಳೆ. ಇಬ್ಬರೂ ಮೊದಲ ಬಾರಿಗೆ ಭೇಟಿಯಾಗುತ್ತಾರೆ, ಈ ವೇಳೆ ಹುಡುಗಿ ತನ್ನ ಶಾಲಾ ಸಮವಸ್ತ್ರವನ್ನು ಧರಿಸಿದ್ದಳು ಎಂದು ತಿಳಿದುಬಂದಿದೆ. ಆಗ ಟಿಯೋ ಬಾಲಕಿಯ ಜೊತೆ ಲೈಂಗಿಕ ಸಂಪರ್ಕ ಮಾಡುವ ಬೇಡಿಕೆ ಇಡುತ್ತಾನೆ. ಅವನ ಕೋರಿಕೆಗೆ ಬಾಲಕಿ ಒಪ್ಪಿಕೊಳ್ಳುತ್ತಾಳೆ.
ಮೊದಲ ಭೇಟಿಯ ಬಳಿಕ ಎರಡು ದಿನಗಳ ಬಳಿಕ ಮತ್ತೆ ಟಿಯೋ ಬಾಲಕಿಯನ್ನು ಭೇಟಿಯಾಗಲು ಆಕೆಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೋಗುತ್ತಾನೆ. ಇದೇ ರೀತಿ ಇತ್ತೀಚೆಗೆ ಮತ್ತೊಮ್ಮೆ ಹೀಗೆ ಹೋದಾಗ ಆಕೆಯ ಪೋಷಕರ ಕೈಗೆ ಬೆತ್ತಲೆಯಾಗಿಯೇ ಸಿಕ್ಕಿಬಿದ್ದಿದ್ದಾನೆ.