ಮಂಗಳೂರು ದಸರ ವೇಳೆ ಪಾರ್ಟಿ ಮಾಡುತ್ತಿದ್ದ ಗೆಳೆಯನ ಹತ್ಯೆ ಮಾಡಿದ ಪ್ರಕರಣ- ಮೂವರು ಪೊಲೀಸ್ ವಶಕ್ಕೆ - ಘಟನೆಯ ಬಳಿಕದ ಸಿಸಿಟಿವಿ ವಿಡಿಯೋ ಇಲ್ಲಿದೆ...

 


ಮಂಗಳೂರು; ಮಂಗಳೂರಿನಲ್ಲಿ ದಸರಾ ವೇಳೆ ಪಾರ್ಟಿ ಮಾಡುತ್ತಿದ್ದ  ವೇಳೆ ಗೆಳೆಯರ ಮಧ್ಯೆ ಘರ್ಷಣೆ ಆಗಿ ಓರ್ವ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ




 

ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ ಮತ್ತು  ಪ್ರಜ್ವಲ್  ಎಂಬ ಆರು ಮಂದಿ ಗೆಳೆಯರು ಪಂಪ್ ವೆಲ್ ನ ಸಾಯಿ ಪ್ಯಾಲೆಸ್ ನಲ್ಲಿ ಅಕ್ಟೋಬರ್ 14 ರಿಂದ ರೂಂ ಮಾಡಿ ವಾಸವಿದ್ದು ಮೋಜು ಮಾಡುತ್ತಿದ್ದರು




ನಿನ್ನೆ ರಾತ್ರಿ  ಪಾರ್ಟಿ ಮಾಡುವ ವೇಳೆ ಜಗಳವಾಗಿ ರಾತ್ರಿ 2 ಗಂಟೆಗೆ ಜೇಸನ್ ಸುರತ್ಕಲ್   ಎಂಬಾತನು ಧನುಷ್ ಹರಿತವಾದ ಆಯುಧದಿಂದ  ಚುಚ್ಚಿ ಕೊಲೆ ಮಾಡಿದ್ದಾನೆ.




 ರೂಂ ನಲ್ಲಿದ್ದ ಐದು ಮಂದಿಯಲ್ಲಿ ಮೂವರನ್ನು ಪೊಲೀಸರು  ವಶಕ್ಕೆ ತೆಗೆದುಕೊಳ್ಳಲಾಗಿದ್ದು ಇನ್ನಿಬ್ಬರ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ