ಹಿರಿಯ ಸಾಮಾಜಿಕ, ಧಾರ್ಮಿಕ ಸೇವಾ ಮುಖಂಡ ಲೋಕಯ್ಯ ಶೆಟ್ಟಿ ಇನ್ನಿಲ್ಲ
ಹಿರಿಯ ಸಾಮಾಜಿಕ, ಧಾರ್ಮಿಕ ಸೇವಾ ಮುಖಂಡ ಲೋಕಯ್ಯ ಶೆಟ್ಟಿ ದೈವಾಧೀನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಶ್ರೀಯುತರು ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಸಕ್ರಿಯ ಸದಸ್ಯ ಹಾಗೂ ಗಣೇಶೋತ್ಸವ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ಲೋಕಯ್ಯ ಶೆಟ್ಟಿ ಅವರು ದಿ.ಮುಂಡಪ್ಪ ಶೆಟ್ಟಿ, ಪೂವಕ್ಕೆ ದಂಪತಿಯ ಪುತ್ರ. ಬೋಳಾರ ಲೀವೆಲ್ ನ ನಿವಾಸಿಯಾಗಿದ್ದರು.
ಮೃತರು ಕುಟುಂಬದ ಸದಸ್ಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಲೋಕಯ್ಯ ಶೆಟ್ಟಿ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
