-->
ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಸಾವನ್ನಪ್ಪಿದ ಮಧ್ಯವಯಸ್ಕ ಮಹಿಳೆ

ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಸಾವನ್ನಪ್ಪಿದ ಮಧ್ಯವಯಸ್ಕ ಮಹಿಳೆ

ನಾಗರ್​ ಕರ್ನೂಲ್​(ತೆಲಂಗಾಣ): ತೆಲಂಗಾಣದ ತೆಲಂಗಾಣದ ನಾಗರ್​ ಕರ್ನೂಲ್​​ ಜಿಲ್ಲೆಯ ನೇರಳಪಲ್ಲಿಯಲ್ಲಿ ಮಧ್ಯವಯಸ್ಕ ಮಹಿಳೆ ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.

ತೆಲಂಗಾಣದ ನಾಗರ್​ ಕರ್ನೂಲ್​​ ಜಿಲ್ಲೆಯ ನೇರಳಪಲ್ಲಿಯ ನೀಲಮ್ಮ(50) ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಮೃತಪಟ್ಟ ಮಹಿಳೆ.

ಮೃತ ನೀಲಮ್ಮ ಮನೆಯಲ್ಲಿ ಊಟದೊಂದಿಗೆ ಬೇಯಿಸಿದ ಮೊಟ್ಟೆ ತಿನ್ನಲು ಬಾಯಿಯೊಳಗೆ ಹಾಕಿಕೊಂಡಿದ್ದರು. ಆದರೆ ಮೊಟ್ಟೆ ನೇರವಾಗಿ ಗಂಟಲಿನ ಭಾಗದಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಅವರು ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ನೀಲಮ್ಮನವರ ಕುಟುಂಬಸ್ಥರು ಆಕೆ ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಮೃತಪಟ್ಟಿರುವರೆಂದು ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article