ಮಂಗಳೂರಿನ ಬಾಂಬೆ ಲಕ್ಕಿ ಹೋಟೆಲ್ ಮಾಲಕ ನಿಧನ

 



ಮಂಗಳೂರು: ಮಂಗಳೂರಿನಲ್ಲಿ ಖ್ಯಾತಿ ಪಡೆದಿರುವ ಬಾಂಬೆ ಲಕ್ಕಿ  ಹೋಟೆಲ್  ಮಾಲಕ ಹಾಜಿ ಎಂ. ಸುಲೈಮಾನ್ ಇಂದು ನಿಧನರಾಗಿದ್ದಾರೆ.

 

ನಗರದ ಬಂದರ್ ನಲ್ಲಿರುವ ಬಾಂಬೆ ಲಕ್ಕಿ ಹೋಟೆಲ್ ಕರಾವಳಿಯಲ್ಲಿ ಖ್ಯಾತಿವೆತ್ತ ಹೋಟೆಲ್ ಆಗಿದೆ.

ಹಾಜಿ ಎಂ. ಸುಲೈಮಾನ್ ( 84 ) ಪತ್ನಿ, 5 ಪುತ್ರರು ಮತ್ತು ಎರಡು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೂಲತಃ ಕುದ್ರೋಳಿಯವರಾದ ಹಾಜಿ ಸುಲೈಮಾನ್ ಅವರು ನಗರದ ಪಾಂಡೇಶ್ವರದಲ್ಲಿ ನೆಲೆಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಟ್ರಸ್ಟಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು

ಹಾಜಿ ಸುಲೈಮಾನ್ ಅವರು, ಕೊಡುಗೈ ದಾನಿಯೆಂದು ಗುರುತಿಸಿಕೊಂಡಿದ್ದರು.  

BREAKING NEWS
Loading latest news...
Join our WhatsApp Channel Powered By : Online Pudu