
ಯುವತಿಗಾಗಿ ಕಾಲೇಜು ಸಹಪಾಠಿಗಳಿಬ್ಬರ ಮಧ್ಯೆ ಕಿತ್ತಾಟ ಓರ್ವನ ಕೊಲೆಯಲ್ಲಿ ಅಂತ್ಯ!
10/08/2021 09:41:00 AM
ಬೆಂಗಳೂರು: ಯುವತಿಯೋರ್ವಳನ್ನು ಪ್ರೀತಿಸುವ ವಿಚಾರದಲ್ಲಿ ಕಾಲೇಜು ಸಹಪಾಠಿಗಳಿಬ್ಬರ ನಡುವೆ ನಡೆದ ಕಿತ್ತಾಟ ಓರ್ವನಕ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿಯೇ ಹೆಣ ಬಿದ್ದಿದೆ.
ಲಿಖಿತ್ ಎಂಬ ವಿದ್ಯಾರ್ಥಿ ಎಂಬಾತ ಕೊಲೆಯಾದಾತ. ನಯೀದ್ ಕೊಲೆ ಮಾಡಿದಾತ.
ನಯೀದ್ ಹಾಗೂ ಲಿಖಿತ್ ಎಂಬಿಬ್ಬರು ಯುವಕರು ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಇವರಿಬ್ಬರು ಓರ್ವ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಅದೇ ವಿಚಾರವಾಗಿ ಇಬ್ಬರೂ ವೈಮನಸ್ಸು ಹೊಂದಿದ್ದರು. ಯುವತಿಯ ವಿಚಾರವಾಗಿ ಮಾತನಾಡಲು ಲಿಖಿತ್ ನಯೀದ್ನನ್ನು ಬರಲು ಹೇಳಿದ್ದ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ಬೆಳೆದಿದೆ. ಇದು ವಿಕೋಪಕ್ಕೆ ಹೋಗಿ ಲಿಖಿತ್ ಡ್ಯಾಗರ್ನಿಂದ ನಯೀದ್ಗೆ ಇರಿಯಲು ಮುಂದಾಗಿದ್ದು, ಆಗ ಆ ಡ್ಯಾಗರ್ ಕಿತ್ತುಕೊಂಡ ನಯೀದ್ ಲಿಖಿತ್ಗೆ ಚುಚ್ಚಿದ್ದರಿಂದ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಎಚ್ಎಎಲ್ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದು, ನಯೀದ್ ನನ್ನು ವಶಪಡಿಸಿಕೊಂಡಿದ್ದಾರೆ.