-->
ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆ ಹಿಂದೆ ನಟನೊಬ್ಬನ ಹೆಸರು: ನಟಿ ತಂದೆಯ ಆರೋಪ

ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆ ಹಿಂದೆ ನಟನೊಬ್ಬನ ಹೆಸರು: ನಟಿ ತಂದೆಯ ಆರೋಪ

ರಾಮನಗರ: ಕುಣಿಕೆಗೆ ಕೊರಳೊಡ್ಡಿದ ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಬಗ್ಗೆ ಆಕೆಯ ತಂದೆ ಗಂಭೀರ ಆರೋಪ‌ ಮಾಡಿದ್ದು, ಇದೀಗ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. 

ಸವಿ ಮಾದಪ್ಪ ಸಾವಿನ ಹಿಂದೆ ಕನ್ನಡ - ತೆಲುಗು ಕಿರುತೆರೆ ನಟ ಕಾರಣ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಕಿರುತೆರೆ ನಟಿ ಸವಿ ಮಾದಪ್ಪ (ಸೌಜನ್ಯ) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಪ್ರಭು ಮಾದಪ್ಪ, ಓರ್ವ ನಟನೂ ಸೇರಿ ಒಟ್ಟು ಇಬ್ಬರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

"ನನ್ನ ಮಗಳು ಆತ್ಮಹತ್ಯೆ ಮಾಡಿರೋದಕ್ಕೆ ಆ ನಟನೇ ಕಾರಣ" ಎಂದು ಪ್ರಭು ಮಾದಪ್ಪ ಕನ್ನಡ-ತೆಲುಗು ಕಿರುತೆರೆ ನಟನ ವಿರುದ್ಧ ದೂರು ನೀಡಿದ್ದಾರೆ. ಆತ "ನನ್ನ ಮಗಳು ಸವಿ ಮಾದಪ್ಪನನ್ನು  ಯಾವಾಗಲೂ ಮದುವೆಯಾಗಲು ಪೀಡಿಸುತ್ತಿದ್ದ. ಆತನೇ ಮನೆಗೆ ಬಂದಿರಬಹುದು, ಬಳಿಕ ಆಕೆ ಆತ್ಮಹತ್ಯೆ ನಿರ್ಧಾರ ಮಾಡಿರಬಹುದು" ಎಂದು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಅಲ್ಲದೆ ಆ ನಟನ ಜೊತೆಗೆ ಮೃತ ನಟಿಯ ಪಿಎ ಮಹೇಶ್​ ವಿರುದ್ಧವೂ ದೂರು ನೀಡಿದ್ದಾರೆ. 

ಬೆಂಗಳೂರು ನಗರದ ಕುಂಬಳಗೋಡು ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣ ದಾಖಲು ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.‌

Ads on article

Advertise in articles 1

advertising articles 2

Advertise under the article