-->
ಬಸ್ ನಿಂದ ಇಳಿಯುವ ಮುನ್ನ ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಮಾಯವಾದ- ಗೀತಾ ಗೋವಿಂದಂ ಸಿನಿಮಾ ನೋಡುತ್ತಿದ್ದ ಯುವಕನಿಂದ ನಡೆಯಿತು ಫಿಲ್ಮಿಸ್ಟೈಲ್ ಕಿಸ್ಸಿಂಗ್!

ಬಸ್ ನಿಂದ ಇಳಿಯುವ ಮುನ್ನ ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಮಾಯವಾದ- ಗೀತಾ ಗೋವಿಂದಂ ಸಿನಿಮಾ ನೋಡುತ್ತಿದ್ದ ಯುವಕನಿಂದ ನಡೆಯಿತು ಫಿಲ್ಮಿಸ್ಟೈಲ್ ಕಿಸ್ಸಿಂಗ್!
ಬೆಂಗಳೂರು: ಬೆಂಗಳೂರಿನಲ್ಲಿ ಬಸ್ಸಿನಿಂದ ಇಳಿಯುವ ಮುನ್ನ ತನ್ನ ಸಹ ಪ್ರಯಾಣಿಕೆ , ಕಾಲೇಜು ವಿದ್ಯಾರ್ಥಿನಿಗೆ  ಯುವಕನೊಬ್ಬ ಕಿಸ್ ಕೊಟ್ಟು ಇಳಿದು ಹೋಗಿದ್ದು ಅ, ಈತನಿಗಾಗಿ    ಪೊಲೀಸರು ಹುಡುಕಾಟವನ್ನು ಆರಂಭಿಸಿದ್ದಾರೆ.


ಪೊಲೀಸರ ಪ್ರಕಾರ, ಸೆಪ್ಟೆಂಬರ್ 13 ರಂದು ಬಾಲಕಿ ವಿನಾಯಕ ಚತುರ್ಥಿ ಹಬ್ಬದ ನಂತರ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಐಷಾರಾಮಿ ಬಸ್‌ನಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.


ಆಕೆಯ ಸೀಟಿನ ಹತ್ತಿರ ಕುಳಿತಿದ್ದ ಆರೋಪಿಯು 'ಗೀತಾ ಗೋವಿಂದಂ' ತೆಲುಗು ಚಿತ್ರವನ್ನು ನೋಡುತ್ತಿದ್ದನು. ಈ ಸಿನಿಮಾದಲ್ಲಿ  ನಾಯಕ ನಾಯಕಿಯನ್ನು ಗಾಡ ನಿದ್ರೆಯಲ್ಲಿದ್ದಾಗ ಚುಂಬಿಸುವ ದೃಶ್ಯವಿದೆ. 
ಆಕೆ ನಿದ್ರೆಗೆ ಹೋಗುವ ಮುನ್ನ ಯುವಕ ವಿಚಿತ್ರವಾಗಿ ನೋಡುತ್ತಿದ್ದನು ಎಂದು ಹುಡುಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.


ಪ್ರಯಾಣಿಕರು ಇಳಿಯಲು ಪೀಣ್ಯ-ಜಾಲಹಳ್ಳಿ ಬಳಿ ಬಸ್ ನಿಲ್ಲಿಸಿದಾಗ, ಈ ಯುವಕ ವಿದ್ಯಾರ್ಥಿನಿಯ ಕೆನ್ನೆಗೆ ಮುತ್ತಿಟ್ಟು ಬಸ್ ನಿಂದ ಇಳಿದು ಹೋಗಿದ್ದಾನೆ. 
ಏನಾಯಿತು ಎಂದು ಅವಳು ತಿಳಿದುಕೊಳ್ಳುವ ಮೊದಲೇ, ಯುವಕ ಬಸ್ಸಿನಿಂದ ಕೆಳಗಿಳಿದು ಕಣ್ಮರೆಯಾಗಿದ್ದಾನೆ.


ಆತನ "ಫಿಲ್ಮಿ-ಶೈಲಿಯ" ಕಿಸ್ ಗೆ  ಹುಡುಗಿ ಆಕ್ರೋಶಗೊಂಡು ದೂರು ನೀಡಿದ್ದಾಳೆ. ವಿದ್ಯಾರ್ಥಿನಿಯು ಸಹ ಪ್ರಯಾಣಿಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು  ತಿಳಿಸಿವೆ.

 ಬಾಗಲಗುಂಟೆ ಪೊಲೀಸರು ಕಿಸ್ ನೀಡಿ ಪರಾರಿಯಾದ ಯುವಕನನ್ನು ಹುಡುಕುತ್ತಿದ್ದಾರೆ.  ಆತನನ್ನು ಪತ್ತೆಹಚ್ಚಲು  ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ

Ads on article

Advertise in articles 1

advertising articles 2

Advertise under the article