RDPR 6406 Govt post for PUC | ಬೃಹತ್ ನೇಮಕಾತಿ- 6406 ಸರ್ಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅರ್ಹತೆ: PUC ಪಾಸ್


RDPR 6406 Govt post for PUC | ಬೃಹತ್ ನೇಮಕಾತಿ- 6406 ಸರ್ಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅರ್ಹತೆ: PUC ಪಾಸ್


ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೆಪ್ಟಂಬರ್, 2021ರ ಅಧಿಸೂಚನೆಯಂತೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ ೨) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.



ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ ೨) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಕೋಟಾದಡಿ ಭರ್ತಿ ಮಾಡಲು ನಿರ್ಧರಿಸಲಾಗಿದೆ.



ಗ್ರಾಮ ಪಂಚಾಯತ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಿಲ್ ಕಲೆಕ್ಟರ್‌ಗಳು, ಗುಮಾಸ್ತರ ಹುದ್ದೆಯಿಂದ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಬೇಕಾಗಿರುವುದರಿಂದ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆ ಹಿಡಿಯಲಾಗಿತ್ತು.



ಇದೀಗ, ಪ್ರಸ್ತುತ ಆರ್ಥಿಕ ಇಲಾಖೆಯು ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ ೨) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಮಾಡಲು ಒಪ್ಪಿಗೆ ನೀಡಿದೆ.


ಹುದ್ದೆಗಳ ವಿವರ:

1) ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗಾಮೀನಾಭಿವೃದ್ಧಿ ಸಹಾಯಕ(ಗ್ರೇಡ್ ೨)

ಹುದ್ದೆಗಳ ಸಂಖ್ಯೆ: 3827


ವೇತನ: 21,400/- to 42,000/-


ನೇಮಕಾತಿ ವಿಧಾನ: ಶೇ. 30ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳ ಅಧಿನಿಯಮದ ಪ್ರಕಾರ ನೇರ ನೇಮಕಾತಿ ಮಾಡಲಾಗುವುದು


ಉಳಿದ ಶೇ. 70ರಷ್ಟನ್ನು 3:2 ನಿಯಮದಂತೆ ಸರ್ವಿಸ್ ನೇರ ನೇಮಕಾತಿ ಮಾಡುವುದು, ಬಿಲ್ ಕಲೆಕ್ಟರ್ (೩) ಮತ್ತು ಆರು ವರ್ಷಗಳಿಗೆ ಕಡಿಮೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿರುವ ಲೆಕ್ಕಾಧಿಕಾರಿ, ಕ್ಲರ್ಕ್‌, ಟೈಪಿಸ್ಟ್, ಕ್ಲರ್ಕ್/ ಡಾಟಾ ಎಂಟ್ರಿ ಆಪರೇಟರ್‌(೨) ನೇಮಕಾತಿಯನ್ನು ಮಾಡಲಾಗುವುದು


ನೇರ ನೇಮಕಾತಿ ಆಗಬೇಕಾದರೆ,

೧) ಅಭ್ಯರ್ಥಿಯು ಕನಿಷ್ಟ PUC ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.


೨) ಕಂಪ್ಯೂಟರ್ ಸಾಕ್ಷರರಾಗಿರಬೇಕು


ಸರ್ವಿಸ್ ನೇರ ನೇಮಕಾತಿಗೆ

೧) ಅಭ್ಯರ್ಥಿಯು ಕನಿಷ್ಟ PUC ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.


೨) ಲೆಕ್ಕಾಧಿಕಾರಿ, ಕ್ಲರ್ಕ್‌, ಟೈಪಿಸ್ಟ್, ಕ್ಲರ್ಕ್/ ಡಾಟಾ ಎಂಟ್ರಿ ಆಪರೇಟರ್‌ ಆಗಿ ಕನಿಷ್ಟ 6 ವರ್ಷಗಳ ಸೇವೆ ಸಲ್ಲಿಸಿರಬೇಕು.




2) ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ


ಹುದ್ದೆಗಳ ಸಂಖ್ಯೆ: 2579


ವೇತನ: 21,400/- to 42,000/-


ನೇಮಕಾತಿ ವಿಧಾನ: ಶೇ. 50ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳ ಅಧಿನಿಯಮದ ಪ್ರಕಾರ ನೇರ ನೇಮಕಾತಿ ಮಾಡಲಾಗುವುದು


ಉಳಿದ ಶೇ. 50ರಷ್ಟನ್ನು 1:1 ನಿಯಮದಂತೆ ಸರ್ವಿಸ್ ನೇರ ನೇಮಕಾತಿ ಮಾಡುವುದು, ಬಿಲ್ ಕಲೆಕ್ಟರ್ (೩) ಮತ್ತು ಆರು ವರ್ಷಗಳಿಗೆ ಕಡಿಮೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿರುವ ಲೆಕ್ಕಾಧಿಕಾರಿ, ಕ್ಲರ್ಕ್‌, ಟೈಪಿಸ್ಟ್, ಕ್ಲರ್ಕ್/ ಡಾಟಾ ಎಂಟ್ರಿ ಆಪರೇಟರ್‌(೨) ನೇಮಕಾತಿಯನ್ನು ಮಾಡಲಾಗುವುದು


ನೇರ ನೇಮಕಾತಿ ಆಗಬೇಕಾದರೆ,

೧) ಅಭ್ಯರ್ಥಿಯು ಕನಿಷ್ಟ PUC ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

೨) ಕಂಪ್ಯೂಟರ್ ಸಾಕ್ಷರರಾಗಿರಬೇಕು


ಸರ್ವಿಸ್ ನೇರ ನೇಮಕಾತಿಗೆ

೧) ಅಭ್ಯರ್ಥಿಯು ಕನಿಷ್ಟ PUC ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.


೨) ಲೆಕ್ಕಾಧಿಕಾರಿ, ಕ್ಲರ್ಕ್‌, ಟೈಪಿಸ್ಟ್, ಕ್ಲರ್ಕ್/ ಡಾಟಾ ಎಂಟ್ರಿ ಆಪರೇಟರ್‌ ಆಗಿ ಕನಿಷ್ಟ 6 ವರ್ಷಗಳ ಸೇವೆ ಸಲ್ಲಿಸಿರಬೇಕು.


ನೇಮಕಾತಿ ಪ್ರಕ್ರಿಯೆ ಕುರಿತ ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಂತರ್ಜಾಲವನ್ನು ಭೇಟಿ ಮಾಡುವುದು


https://rdpr.karnataka.gov.in/


ನೋಟಿಫಿಕೇಶನ್‌ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

https://rdpr.karnataka.gov.in/page/Recruitment/Notifications/kn


https://www.karnatakacareers.in/wp-content/uploads/2021/09/6406-Grama-Panchayat-Secretary-Second-Division-Accounts-Assistant-Posts-Advt-Details-RDPR-Karnataka.pdf