ಅಪಘಾತದಲ್ಲಿ ಯುವಕ ಮೃತ್ಯು: ಇಷ್ಟದ ಬೈಕ್‌ನೊಂದಿಗೆ ಸಮಾಧಿ ಮಾಡಿದ ಪೋಷಕರು

ಗಾಂಧಿನಗ‌ರ್: ಹೆಚ್ಚಿನವರು ತಮ್ಮ ವಾಹನವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ತಮ್ಮಿಷ್ಟದ ಬೈಕ್, ಕಾರನ್ನು ಜೀವನದ ಒಂದು ಭಾಗವೇ ಎಂಬಂತೆ ಪ್ರೀತಿಸುತ್ತಾರೆ. ಇಲ್ಲೊಬ್ಬ ಯುವಕ ತಾನು ಹೆಚ್ಚಾಗಿ ಇಷ್ಟಪಡುತ್ತಿದ್ದ ವಾಹನದಲ್ಲಿ ಸಂಚರಿಸುತ್ತಿರುವಾಗಲೇ ಪ್ರಾಣ ಕಳೆದುಕೊಂಡಿದ್ದು, ಇದೀಗ ಆತನ ಪೋಷಕರು ಆ ಬೈಕ್‌ನೊಂದಿಗೆ ಸಮಾಧಿ ಮಾಡಿರುವ ದುರಂತ ಗುಜರಾತ್‌ನ ಖೇಡಾದಲ್ಲಿ ನಡೆದಿದೆ.

ಗುಜರಾತ್ ರಾಜ್ಯದ ನಾಡಿಯಾಡ್‌ನ ಉತ್ತರಸಂದ ಗ್ರಾಮದ ಕ್ರಿಶ್ಚಿಯನ್ ಕಾಲನಿ ನಿವಾಸಿ ಕ್ರಿಶ್ ಪರ್ಮಾರ್ (18) ಅಪಘಾತದಲ್ಲಿ ಮೃತಪಟ್ಟ ಯುವಕ. ಆತನನ್ನು ಆತನ ಇಷ್ಟದ ಬೈಕ್‌‌ನೊಂದಿಗೇ ಸಮಾಧಿ ಮಾಡಿದ್ದಾರೆ.

ಇತ್ತೀಚೆಗೆ ಕ್ರಿಶ್ ಪರ್ಮಾರ್ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗ್ರಾಮದ ಬಳಿ ಅವರ ಬೈಕ್ ಟ್ರ್ಯಾಕ್ಟ‌ರ್ ಟ್ರಾಲಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪರಿಣಾಮ ಕ್ರಿಶ್ ಗಂಭೀರ ಗಾಯಗೊಂಡಿದ್ದರು. 12 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಕ್ರಿಶ್ ಸಾವನ್ನಪ್ಪಿದ್ದಾರೆ.

ಕ್ರಿಶ್ ತನ್ನ ಬೈಕ್‌ ಅನ್ನು ಅತೀ ಹೆಚ್ಚು ಇಷ್ಟಪಡುತ್ತಿದ್ದರು. ಅದೇ ಬೈಕ್‌ನಲ್ಲಿ ತೆರಳುವಾಗ ಭೀಕರ ಅಪಘಾತ ಸಂಭವಿಸಿದೆ. ಆದ್ದರಿಂದ ಕುಟುಂಬಸ್ಥರು ಅವನು ಹೆಚ್ಚು ಇಷ್ಟಪಡುತ್ತಿದ್ದ ಬೈಕ್‌ನೊಂದಿಗೆ ಅಂತ್ಯಸಂಸ್ಕಾರ ನಟಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu