-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅಹಮದಾಬಾದ್ ವಿಮಾನ ಪತನದ ಮೊಬೈಲ್ ವೀಡಿಯೋ ಮಾಡಿದ್ದ ಬಾಲಕನಿಗೀಗ ಈ ಭಯ ಶುರುವಾಗಿದೆ

ಅಹಮದಾಬಾದ್ ವಿಮಾನ ಪತನದ ಮೊಬೈಲ್ ವೀಡಿಯೋ ಮಾಡಿದ್ದ ಬಾಲಕನಿಗೀಗ ಈ ಭಯ ಶುರುವಾಗಿದೆ


ಅಹಮದಾಬಾದ್: ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಪತನಗೊಂಡ ವೀಡಿಯೋ ಭಾರೀ ವೈರಲ್ ಆಗಿತ್ತು. ಅದರಲ್ಲೂ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಎಲ್ಲರ ಗಮನ ಸೆಳೆದಿತ್ತು. ಈ ವಿಡಿಯೋವನ್ನು ಮಾಡಿದ್ದು ಆರ್ಯನ್ ಎಂಬ ಬಾಲಕ. ಈ ವಿಡಿಯೋ ವೈರಲ್ ಆದ ಬಳಿಕ ಆರ್ಯನ್ ತೊಂದರೆಯಲ್ಲಿ ಸಿಲುಕಿದ್ದಾನೆ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.

ಪತನಗೊಂಡ ಏರ್ ಇಂಡಿಯಾ ವಿಮಾನ ಆಕಾಶದಿಂದ ಬಹಳ ಕೆಳಮಟ್ಟದಲ್ಲಿ ಹಾರುತ್ತಿದ್ದರಿಂದ ತಾನು ವಿಡಿಯೋ ತೆಗೆದಿದ್ದೇನೆ. ಇದೇ ವೇಳೆ ವಿಮಾನ ಪತನಗೊಂಡಾಗ ಬಹಳ ಭಯಪಟ್ಟಿದ್ದೇನೆ ಎಂದು ಆರ್ಯನ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ. ಅಲ್ಲದೆ, ಆರ್ಯನ್ ತನ್ನ ಜೀವನದಲ್ಲಿ ಒಮ್ಮೆಯೂ ವಿಮಾನ ಏರದಿರಲು ನಿಶ್ಚಯಿಸಿದ್ದಾನಂತೆ. ಸದ್ಯ ವಿಮಾನ ಅಂದ್ರೇನೆ ಹೆದರುತ್ತಿದ್ದಾನೆ ಎಂದು ಆತನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ.

ವಿಮಾನ ಪತನ ಆಗುತ್ತಿರುವುದನ್ನು ತನ್ನ ಸ್ನೇಹಿತರಿಗೆ ತೋರಿಸಲು ತಾನು ವೀಡಿಯೋ ಮಾಡಿದ್ದಾಗಿ ಆರ್ಯನ್ ಹೇಳುತ್ತಾನೆ. ಆರ್ಯನ್ ಕುಟುಂಬವು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಲಕ್ಷ್ಮಿ ನಗರದಲ್ಲಿ ವಾಸಿಸುತ್ತಿದೆ. ತನ್ನ ಮನೆಯ ಮೇಲಿದ್ದಾಗ ವಿಮಾನವು ಬಹಳ ಕೆಳ ಮಟ್ಟದಲ್ಲಿ ಹಾರಿ ಹೋದ ಏರ್ ಇಂಡಿಯಾ ಡ್ರೀಮ್‌ಲೈನ‌ರ್ 787-8 ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಳ್ಳುವುದನ್ನು ಆರ್ಯನ್ ರೆಕಾರ್ಡ್ ಮಾಡಿದ್ದಾನೆ. ಅಪಘಾತದ ತನಿಖೆಯಲ್ಲಿ ಈ ವಿಡಿಯೋ ಈಗ ಪ್ರಮುಖ ಸಾಕ್ಷಿಯಾಗಿದೆ.

ವಿಮಾನಗಳು ಇಷ್ಟು ಕಡಿಮೆ ಎತ್ತರದಲ್ಲಿ ಹಾರುವುದನ್ನು ಮತ್ತು ಅಷ್ಟು ದೊಡ್ಡ ಶಬ್ದ ಮಾಡುವುದನ್ನು ನಾನು ಎಂದಿಗೂ ಕೇಳಿಲ್ಲ. ಅದನ್ನು ನನ್ನ ಸ್ನೇಹಿತರಿಗೆ ತೋರಿಸಲು ನಾನು ವಿಡಿಯೋ ಮಾಡಿದೆ. ಆದರೆ, ಅದು ಪತನದ ದೃಶ್ಯವಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ವಿಮಾನವು ಗಾಳಿಯಲ್ಲಿ ತೂಗಾಡುತ್ತಿರುವುದನ್ನು ಮತ್ತು ನಂತರ ದೊಡ್ಡ ಶಬ್ದದೊಂದಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದಾಗ ನನಗೆ ತುಂಬಾ ಭಯವಾಯಿತು ಎಂದು ಆರ್ಯನ್ ಶನಿವಾರ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಇನ್ನು ಈ ಘಟನೆಯ ನಂತರ ಆರ್ಯನ್ ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂದು ಆತನ ಕುಟುಂಬ ಸದಸ್ಯರು ಹೇಳಿದ್ದಾರೆ. ವಿವಿಧ ಮಾಧ್ಯಮಗಳಿಂದ ಪದೇಪದೆ ಬರುವ ಫೋನ್ ಕರೆಗಳು ತೊಂದರೆ ನೀಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಅಪಘಾತದ ನಂತರ ಆರ್ಯನ್ ಮಾತ್ರವಲ್ಲದೆ ಲಕ್ಷ್ಮಿ ನಗರದ ಇಡೀ ಜನರು ಭಯಭೀತರಾಗಿದ್ದಾರೆ ಎಂದು ಆರ್ಯನ್ ಕುಟುಂಬಸ್ಥರು ಹೇಳಿದರು.

Ads on article

Advertise in articles 1

advertising articles 2

Advertise under the article

ಸುರ