-->
ಪುಣೆ: ಉದ್ಯೋಗದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಶೋಷಣೆ: ಗೋಡೌನ್ ಮ್ಯಾನೇಜರ್ ಅರೆಸ್ಟ್

ಪುಣೆ: ಉದ್ಯೋಗದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಶೋಷಣೆ: ಗೋಡೌನ್ ಮ್ಯಾನೇಜರ್ ಅರೆಸ್ಟ್

ಪುಣೆ: ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡುವ ಕಾಮುಕರ ಬಗ್ಗೆ ಮಹಿಳೆಯರು ಎಷ್ಟು ಎಚ್ಚರಿಕೆಯಿಂದ ಇದ್ದರೂ, ಇಂತಹ ಪ್ರಕರಣಗಳು ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಒಂದು ಘಟನೆ ಪುಣೆಯ ಲೋನಿ ಕಲಭೋರ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಗೋಡೌನ್ ಮ್ಯಾನೇಜರ್​​ ಒಬ್ಬ ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ಮೇಲೆ ಲೈಂಗಿಕ ಶೋಷಣೆ ನಡೆಸಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ನಗರದ ಮಂತರ್​ವಾಡಿಯ ನಿವಾಸಿ ಮಂಗೇಶ್ ಬದೋಳೆ(32) ಎಂಬಾತ ಬಂಧಿತ ಆರೋಪಿ. 

ಕಳೆದ ಕೆಲವು ತಿಂಗಳಿಂದ 32 ವರ್ಷದ ಸಂತ್ರಸ್ತೆ ಕೆಲಸ ನಿರ್ವಹಿಸುತ್ತಿದ್ದ ಗೋಡೌನ್ ನ ಮ್ಯಾನೇಜರ್​ ಆದ ಆರೋಪಿ ಮಂಗೇಶ್ ಬದೋಳೆ ಆಕೆಯ ಅಂಗಾಂಗಗಳನ್ನು ವಿಕೃತವಾಗಿ ಮುಟ್ಟುತ್ತಾ ಹಿಂಸಿಸುತ್ತಿದ್ದ. ಈ ಬಗ್ಗೆ ಆಕೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ, ಆತ ತನ್ನ ಚಾಳಿ ಬಿಟ್ಟಿರಲಿಲ್ಲ. ಸೆ.11 ರಂದು ಮತ್ತೆ ಆಕೆಯನ್ನು ಲೈಂಗಿಕವಾಗಿ ಶೋಷಿಸುವ ಪ್ರಯತ್ನ ಮಾಡಿದ್ದಾನೆ‌. ಪರಿಸ್ಥಿತಿಯಿಂದ ರೋಸಿಹೋಗಿರುವ ಮಹಿಳೆ, ಲೋನಿ ಕಲಭೋರ್​ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂತ್ರಸ್ತೆಯ ದೂರಿನನ್ವಯ ಕಾಮುಕ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ‌. ಈ ಬಗ್ಗೆ ತನಿಖೆ ಮುಂದುವರಿದಿದೆ. 

Ads on article

Advertise in articles 1

advertising articles 2

Advertise under the article