-->

ಆರ್​ಎಸ್​​ಎಸ್ ಮಾದರಿಯಲ್ಲಿ ಪಕ್ಷ ಬಲವರ್ಧನೆಗೆ ಕಾಂಗ್ರೆಸ್ ನಲ್ಲೂ ರಾಷ್ಟ್ರಮಟ್ಟದ ಸಂಘಟನೆ ಆರಂಭ

ಆರ್​ಎಸ್​​ಎಸ್ ಮಾದರಿಯಲ್ಲಿ ಪಕ್ಷ ಬಲವರ್ಧನೆಗೆ ಕಾಂಗ್ರೆಸ್ ನಲ್ಲೂ ರಾಷ್ಟ್ರಮಟ್ಟದ ಸಂಘಟನೆ ಆರಂಭ

ನವದೆಹಲಿ: ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಆರ್​ಎಸ್​​ಎಸ್  ಮೂಲಕ ಪಕ್ಷ ಬಲವರ್ಧನೆ ಸೇರಿದಂತೆ ಹಲವಾರು ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವುದನ್ನು ಗಮನಿಸಿರುವ ಕಾಂಗ್ರೆಸ್‌, ತಾನೂ ಅದೇ ರೀತಿಯಲ್ಲಿ ಸಂಘವೊಂದನ್ನು ಸ್ಥಾಪನೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳ ಮಾದರಿಯ ಕಾಂಗ್ರೆಸ್​ ಜವಾಹರ್ ಬಾಲ್ ಮಂಚ್ (ಜೆಬಿಎಂ) ಸ್ಥಾಪಿಸಿದೆ. 

ಇದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು, ಜಾತ್ಯತೀತ ನಿಲುವನ್ನು ಪ್ರಚಾರ ಮಾಡಲು ಹಾಗೂ ಯುವ ಸಮೂಹವನ್ನು ಆಕರ್ಷಿಸಲು ಇದು ನೆರವಾಗಲಿದೆ ಎಂದು ಪಕ್ಷ ಹೇಳಿದೆ. ಆರ್‌ಎಸ್‌ಎಸ್‌ ಯುವ ಪೀಳಿಗೆಯನ್ನು ಆಕರ್ಷಿಸಿ, ತನ್ನತ್ತ ಸೆಳೆದು, ಅವರ ಮೂಲಕವೇ ಜನೋಪಕಾರಿ ಕಾರ್ಯ ಮಾಡುತ್ತಿರುವುದು ಎಲ್ಲೆಡೆ ತಿಳಿದ ವಿಚಾರ. ಇದೀಗ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಕೂಡ ಅದೇ ಹಾದಿಯಲ್ಲಿ ಸಾಗಲು ಚಿಂತನೆ ನಡೆಸುತ್ತಿದೆ. 

ಈ ಮೂಲಕ ಮಕ್ಕಳನ್ನು, ಯುವ ಪೀಳಿಗೆಯನ್ನು ಒಂದುಗೂಡಿಸಿ ಸಂಘಟನೆಯನ್ನು ಪ್ರಾರಂಭಿಸಿ, ಬಳಿಕ ಅವರ ಮೂಲಕವೇ ಪಕ್ಷವನ್ನು ಬಲಪಡಿಸುದೇ ಇದರ ಮೂಲ ಉದ್ದೇಶ ಎಂದು ಕಾಂಗ್ರೆಸ್ ತಿಳಿಸಿದೆ. ಅದಕ್ಕಾಗಿ 7 ರಿಂದ 17 ರೊಳಗಿನ ಮಕ್ಕಳಿಗೆ ಜವಾಹರ್ ಬಾಲ್ ಮಂಚ್ ಸಂಘಟನೆಯನ್ನು ಆರಂಭಿಸಲಾಗಿದೆ. 

ಕೆಪಿಸಿಸಿ (ಕೇರಳ ಪ್ರಾದೇಶಿಕ ಕಾಂಗ್ರೆಸ್ ಕಮಿಟಿ) ಕಳೆದ 15 ವರ್ಷಗಳಿಂದ ಈ ರೀತಿಯಲ್ಲಿ ಸಂಘಟನೆ ಮಾಡುತ್ತಿದೆ. ಇದೀಗ ಅದೇ ಮಾದರಿಯಲ್ಲಿ ರಾಷ್ಟ್ರಮಟ್ಟದಲ್ಲಿಯೇ ಈ ರೀತಿಯಲ್ಲಿ ಪಕ್ಷ ಸಂಘ ಸ್ಥಾಪನೆ ಮಾಡಿದೆ. ಈ ಸಂಘಟನೆಗೆ ಕೇರಳ ಕಾಂಗ್ರೆಸ್ ನಾಯಕ ಜಿ.ವಿ. ಹರಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕೇರಳದಲ್ಲಿ ಇಲ್ಲಿಯವರೆಗೆ ಎರಡೂವರೆ ಲಕ್ಷ ಮಕ್ಕಳಿಗೆ ತರಬೇತಿ ನೀಡಲಾಗಿದ್ದು, ಅಲ್ಲಿನ ಯಶಸ್ಸು ಗಮನಿಸಿ ರಾಷ್ಟ್ರಮಟ್ಟಕ್ಕೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತಿದೆ. ಶಿಬಿರ, ಕಾರ್ಯಾಗಾರ, ಸೆಮಿನಾರ್‌ ಹಾಗೂ ದೈಹಿಕ ತರಬೇತಿ ಮೂಲಕ ಮಕ್ಕಳಿಗೆ ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಪಕ್ಷದ ಕೊಡುಗೆಗಳ ಬಗ್ಗೆ ಅರಿವು ಮಂಡಿಸಲಾಗುತ್ತದೆ ಎಂದು ಜಿ.ವಿ. ಹರಿ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article