ಅನುಶ್ರೀ ವಿರುದ್ಧ ತಾನು ಹೇಳಿಕೆ ನೀಡಿಲ್ಲವೆಂದು ಕಿಶೋರ್ ಶೆಟ್ಟಿ ನ್ಯಾಯಾಲಯದ ಮುಂದೆ ಹೇಳಲಿ: ಶಶಿಕುಮಾರ್ ಎನ್‌.



ಮಂಗಳೂರು: ಅನುಶ್ರೀ ವಿರುದ್ಧ ತಾನು ಹೇಳಿಕೆ ನೀಡಿಲ್ಲವೆಂದು ಕಿಶೋರ್ ಅಮನ್ ಶೆಟ್ಟಿ ಮಾಧ್ಯಮದ ಮುಂದೆ ಹೇಳುವುದಕ್ಕಿಂತ ನ್ಯಾಯಾಲಯದ ಮುಂದೆ ಹೇಳಲಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ಹೇಳಿದ್ದಾರೆ.


ಆತನಿಗೆ ಚಾರ್ಜ್ ಶೀಟ್ ಬಗ್ಗೆ ಆರೋಪಗಳಿದ್ದಲ್ಲಿ ವಕೀಲರ ಮೂಲಕ ನ್ಯಾಯಾಲಯದ ಮೊರೆಹೋಗಲಿ. ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಡ್ರಗ್ಸ್ ಸೇವನೆ ಮಾಡಿದ್ದಾರೆಂದು ಎಲ್ಲೂ ಉಲ್ಲೇಖವಾಗಿಲ್ಲ. ಕಿಶೋರ್ ಶೆಟ್ಟಿ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ. ಪೊಲೀಸ್ ಇಲಾಖೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದೆ‌. ಮತ್ತೆ ಕಿಶೋರ್ ಅಮನ್ ಶೆಟ್ಟಿಯನ್ನು ಕರೆಸಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದರು.


ನಾನು ಮಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ಸ್ವೀಕರಿಸಿ ಎಂಟು ತಿಂಗಳಾಗಿದ್ದಷ್ಟೇ ಆದರೆ ಈ ಪ್ರಕರಣದ ಬಗ್ಗೆ ಅದಕ್ಕಿಂತ ಮೊದಲೇ ಅಂದರೆ 9 ತಿಂಗಳ‌ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆದರೆ ಈಗ ಯಾಕೆ ಈ ವಿಚಾರ ಸುದ್ದಿಯಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಶಶಿಕುಮಾರ್ ಎನ್. ಎಂದರು.

ಇದನ್ನು ಓದಿ: ಕುಡ್ಲದ ಹುಡುಗಿ ಆ್ಯಂಕರ್ ಅನುಶ್ರೀ ಹೆಸರು ಡ್ರಗ್ಸ್ ಕೇಸಿನ ಚಾರ್ಜ್ ಶೀಟ್ ನಲ್ಲಿ ದಾಖಲು- ಅದರಲ್ಲಿ ಬರೆದದ್ದೇನು?- ಇಲ್ಲಿದೆ ಮಾಹಿತಿ


ಈ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳ ಮೇಲೆ ಅಂತಿಮ ವರದಿ ಸಲ್ಲಿಸಲಾಗಿದ್ದು, ಅದರಲ್ಲಿ ಐವರು ಆರೋಪಿಗಳಿಗೆ ಜಾಮೀನು ದೊರಕಿದೆ. ಓರ್ವ ಆರೋಪಿ ಮಾತ್ರ ನ್ಯಾಯಾಂಗ ಬಂಧನದಲ್ಲಿದ್ದಾನೆ.‌ ಆದರೆ ಅನುಶ್ರೀ ಮೇಲಿರುವ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ.


ಇದನ್ನು ಓದಿ:ಅನುಶ್ರೀ ವಿರುದ್ಧ ಡ್ರಗ್ಸ್ ಆರೋಪ ನಾನು ಮಾಡಿಲ್ಲ, ಚಾರ್ಜ್ ಶೀಟ್ ನಲ್ಲಿರೋದು ಸುಳ್ಳು: ಕಿಶೋರ್ ಅಮನ್‌ ಶೆಟ್ಟಿ

BREAKING NEWS
Loading latest news...
Join our WhatsApp Channel Powered By : Online Pudu